ಹುಬ್ಬಳ್ಳಿ:ಹು-ಧಾ ಮಹಾನಗರದಲ್ಲಿ ಪ್ರತಿನಿತ್ಯ ಟನ್ ಗಟ್ಟಲೆ ತ್ಯಾಜ್ಯ ಸಂಗ್ರಹವಾಗುತ್ತದೆ. ಸಂಗ್ರಹವಾದ ತ್ಯಾಜ್ಯವನ್ನ ವಿಲೇವಾರಿ ಮಾಡುವುದು ಮಹಾನಗರ ಪಾಲಿಕೆಗೆ ದೊಡ್ಡ ಕೆಲಸವಾಗಿದೆ. ಹೀಗೆ ಸಂಗ್ರಹವಾದ ಕಸವನ್ನು ನಿಯಂತ್ರಣಕ್ಕೆ ತರುವಲ್ಲಿ ಪಾಲಿಕೆ ಹಲವಾರು ಯೋಜನೆ ರೂಪಿಸಿದ್ದು,ಮಹಾನಗರ ಪಾಲಿಕೆ ಸ್ವಚ್ಛ ನಗರಕ್ಕೆ ನಾಂದಿ ಹಾಡಲು ಮುಂದಾಗಿದೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಪ್ರತಿನಿತ್ಯ ಟನ್ ಗಟ್ಟಲೆ ಕಸ ಸಂಗ್ರಹವಾಗುತ್ತಿದೆ. ಸಂಗ್ರಹವಾದ ಕಸವನ್ನು ಮಹಾನಗರ ಪಾಲಿಕೆ ಸಮರ್ಪಕವಾಗಿ ನಿರ್ವಹಣೆ ಮಾಡಲು ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು ಐದು ಒಣ ಕಸ ತ್ಯಾಜ್ಯ ವಿಲೇವಾರಿ ಘಟಕಗಳು ಕಾರ್ಯಾರಂಭಗೊಳ್ಳಲಿದ್ದು,ಹು-ಧಾ ಮಹಾನಗರದ ಜನತೆಗೆ ಕಸದಿಂದ ಮುಕ್ತಿ ಸಿಗುವ ಭರವಸೆ ಕಾಣುತ್ತಿವೆ.
ಘನ ತ್ಯಾಜ್ಯ ವಸ್ತು ನಿರ್ವಹಣೆ-2016 ರ ಅನ್ವಯ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ 178 ಆಟೋ ಟಿಪ್ಪರ್ ಮೂಲಕ ಹಸಿ ಮತ್ತು ಒಣಕಸವನ್ನು ಸಂಗ್ರಹಣೆ ಮಾಡಲಾಗುತಿದೆ. 2000 ಕ್ಕೂ ಹೆಚ್ಚು ಪೌರ ಕಾರ್ಮಿಕರು ಪ್ರತಿನಿತ್ಯ ನಗರವನ್ನ ಸ್ವಚ್ಚಗೊಳಿಸುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ 300 ಟನ್ ಸಾಮರ್ಥ್ಯದ ಎರೋಬಿಕ್ ವಿಂಡ್ರೋ ಕಾಂಪೋಸ್ಟ್ ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪನೆ ಮಾಡಲಾಗಿದೆ.ಅಲ್ಲದೇ ಧಾರವಾಡದಲ್ಲಿ 150 ಟಿಪಿಡಿ ಸಾಮರ್ಥ್ಯದ ಘಟಕವನ್ನು ನಿರ್ಮಾಣ ಮಾಡಲಾಗಿದ್ದು,ಎರಡು ಕೂಡ ಕಾರ್ಯಾರಂಭ ಮಾಡಿದೆ.
ಇನ್ನೂ ಕೆಲವು ದಿನಗಳಲ್ಲಿ ಒಣಕಸಕ್ಕೆ ಕಡಿವಾಣ ಹಾಕಿ ಸ್ವಚ್ಛ ನಗರವನ್ನಾಗಿ ಪರಿವರ್ತನೆ ಮಾಡುವ ಕಾರ್ಯ ವೇಗದಿಂದ ಸಾಗಿದ್ದು,ಅವಳಿನಗರ ಅಂದುಕೊಂಡ ರೀತಿಯಲ್ಲಿ ಆಕರ್ಷಕವಾಗಿ ಕಾಣುತ್ತದೆಯೇ ಕಾದುನೋಡಬೇಕಿದೆ.
Kshetra Samachara
11/11/2020 09:50 pm