ನವಲಗುಂದ : ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮತ್ತು ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯೇ ಇಂದಿರಾ ಕ್ಯಾಂಟಿನ್ ಆದರೆ ನವಲಗುಂದದಲ್ಲಿನ ಇಂದಿರಾ ಕ್ಯಾಂಟಿನ್ ಶಂಕು ಸ್ಥಾಪನೆಯಗಿದ್ದಷ್ಟೇ ಬಂತು ನಂತರ ನಿರ್ಮಾಣ ಕಾರ್ಯ ಕೇವಲ ಮರೀಚಿಕೆಯಗಿಯೇ ಉಳಿದು ಬಿಟ್ಟಿದೆ.
ಹೌದು ಬಡವರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಊಟ ಮತ್ತು ಉಪಹಾರ ನೀಡಬೇಕಿದ್ದ ಕ್ಯಾಂಟಿನ್ ಈಗ ನವಲಗುಂದದಲ್ಲಿ ನಿರ್ಮಾಣವಾಗದೆ ನಿಂತು ಹೋಗಿದೆ. ಕಳೆದ ವರ್ಷ ಮಾರ್ಚ್ 3 ನೇ ತಾರೀಕಿನಂದು ಶಂಕು ಸ್ಥಾಪನ ಕಾರ್ಯಕ್ರಮ ನೆರವೇರಿದ್ದು, ಒಂದು ವರ್ಷದ ಮೇಲಾದರೂ ಇದುವರೆಗೂ ನಿರ್ಮಾಣದ ಭಾಗ್ಯ ದೊರಕಿಲ್ಲಾ, ಇನ್ನೂ ಇದಕ್ಕೆ ಬಳಕೆ ಮಾಡಿಕೊಳ್ಳಲಾದ ಸ್ಥಳ ಈಗ ಖಾಲಿ ಬಿದ್ದಿದೆ. ಇದು ನವಲಗುಂದ ಪಟ್ಟಣದ ನಾಗರಿಕರ ಅಸಮಾಧಾನಕ್ಕೂ ಕಾರಣವಾಗಿದೆ.
Kshetra Samachara
11/11/2020 01:52 pm