ಕುಂದಗೋಳ: ಕಾಂಗ್ರೆಸ್ ಸರ್ಕಾರದ ಬಹು ನಿರೀಕ್ಷಿತ 'ಇಂದಿರಾ ಕ್ಯಾಂಟೀನ್' ಯೋಜನೆಯೊಂದು ಕುಂದಗೋಳ ಪಟ್ಟಣದಲ್ಲಿ ಕನಸಾಗಿ ಉಳಿದಿದ್ದು, ಇಂದಿರಾ ಕ್ಯಾಂಟೀನ್ ನಿರ್ಮಾಣ ಹೆಸರಿನಲ್ಲಿ ಜಾಗದ ಜೊತೆ ಹಣ ಅವಧಿಯೂ ವ್ಯರ್ಥವಾದಂತಾಗಿದೆ.
2018 ಡಿಸೆಂಬರ್ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕುಂದಗೋಳಕ್ಕೆ ಇಂದಿರಾ ಕ್ಯಾಂಟೀನ್ ಮಂಜೂರಾಗಿತ್ತು. ಇದಕ್ಕೆ ಮಾರ್ಕೆಟ್ ರಸ್ತೆಗೆ ಹೊಂದಿಕೊಂಡಿರುವ ಪಟ್ಟಣ ಪಂಚಾಯಿತಿಯ ಜಾಗದಲ್ಲಿ ಭದ್ರ ಫೌಂಡೇಶನ್ ಹಾಕಿ ಕೈ ಬಿಟ್ಟಿದ್ದು, ಮರಳಿ ಕ್ಯಾಂಟೀನ್ ಕಾಮಗಾರಿ ಆರಂಭದ ಯಾವುದೇ ವ್ಯವಸ್ಥೆ ನಡೆದಿಲ್ಲ.
ಈ ಕಾರಣ ಕಳೆದ 2 ವರ್ಷದಿಂದ ಪಟ್ಟಣ ಪಂಚಾಯಿತಿಯ ಸುವ್ಯವಸ್ಥಿತ ಜಾಗವೊಂದು ಕ್ಯಾಂಟೀನ್ ಹೆಸರಿನಲ್ಲೇ ಉಪಯೋಗಕ್ಕೆ ಬಾರದೆ ಸಶ್ಮಾನ ಮೌನ ತಳೆದಿದೆ ಮಾತ್ರವಲ್ಲದೆ ಈ ಜಾಗ ಮೂತ್ರ ವಿಸರ್ಜನೆ ಸೇರಿದಂತೆ ರಾತ್ರಿ ಕುಡುಕರಿಗೆ ಅನುಕೂಲವಾಗಿದೆ. ವಿವಿಧ ಕೆಲಸಗಳನ್ನರಸಿ ಕುಂದಗೋಳ ಪಟ್ಟಣ ಸೇರಿದಂತೆ ಹಳ್ಳಿಗರ ಜೇಬಿಗೆ ಖಾಸಗಿ ಹೋಟೆಲ್ ಗಳಿಂದ ಕತ್ತರಿ ಬೀಳುತ್ತಲಿದ್ದರೂ ಈ ಬಗ್ಗೆ ಜನ ಮತ್ತು ಜನಪ್ರತಿನಿಧಿಗಳು ಇಂದಿಗೂ ಧ್ವನಿ ಎತ್ತಿಲ್ಲ.
ಇನ್ನು ಪಟ್ಟಣ ಪಂಚಾಯಿತಿಗೆ ಹೋಗಿ ಈ ಬಗ್ಗೆ ಕೇಳಿದ್ರೇ, 'ಅದು ನಮ್ಮ ಕೈಯಾಗ ಇಲ್ರೀ ಸರ್ಕಾರ ಟೆಂಡರ್ ಕೊಟೈತಿ, ಅವ್ರೇ ಕೆಲ್ಸ ಮಾಡಬೇಕು. ಈಗ ಅವ್ರ ಕೆಲ್ಸ ನಿಲ್ಲಿಸ್ಯಾರ ನಾವೇನು ಮಾಡುದೈತಿ' ಎಂದು ರಾಜ್ಯ ಸರ್ಕಾರ ಕ್ರಮ ತಗೋಬೇಕು ಎನ್ನುತ್ತಾರೆ.
ಒಟ್ಟಾರೆಯಲ್ಲಿ ಕ್ಯಾಂಟೀನ್ ಹೆಸರಿನಲ್ಲಿ ಪಟ್ಟಣ ಪಂಚಾಯಿತಿಗೆ ಆದಾಯದ ಮೂಲವಾದ ಜಾಗವೊಂದು ಬಳಕೆಬಾರದಾಗಿದೆ.
Kshetra Samachara
09/11/2020 08:55 pm