ಕಲಘಟಗಿ : ಪಟ್ಟಣದಿಂದ ಹಳಿಯಾಳ ಸಂಪರ್ಕ ಕಲ್ಪಿಸುವ ರಾಜ್ಯ ರಸ್ತೆ ಕಿತ್ತು ಹೋಗಿದ್ದು,ಧೂಳಿನಿಂದಾಗಿ ಪ್ರಯಾಣಿಕರು ನಿತ್ಯ ಯಾತನೆ ಅನುಭವಿಸ ಬೇಕಿದೆ.ಕಲಘಟಗಿಯಿಂದ ಹಳಿಯಾಳ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸಲು, ದಾಂಡೇಲಿಗೆ ಪೇಪರ ಲಾರಿಗಳ ಸಾಗಾಟ ಜೊತೆಗೆ ಪ್ರಯಾಣಿಕರಿಗೆ ಈ ರಸ್ತೆಯಿಂದಾಗಿ ಜನರಿಗೆ ತೊಂದರೆಯಾಗುವುದರೊಂದಿಗೆ ಅಪಘಾತದ ಭಯ ಕಾಡುತ್ತಿದೆ.ಈಗಾಗಲೇ ಕಲಘಟಗಿ-ಹಳಿಯಾಳ ರಸ್ತೆ ಕಾಮಗಾರಿಗೆ ಭೂಮಿಪೂಜೆ ಮಾಡಲಾಗಿದೆ.ಆದರೆ ಕಾಮಗಾರಿ ನಿಧಾನವಾಗಿ ನಡೆಯುತ್ತಿದ್ದು,ರಸ್ತೆ ಅಭಿವೃದ್ಧಿ ಶೀಘ್ರ ಮಾಡಿ ಪ್ರಯಾಣಿಕರ ಹಿತ ಕಾಪಾಡಿ ಎಂಬುದು ನಾಗರೀಕರ ಒತ್ತಾಯವಾಗಿದೆ.ಇನ್ನಾದರು ಕಾಮಗಾರಿಯನ್ನಾ ಶೀಘ್ರವೇ ಪೂರ್ಣಗೊಳಿಸಿ ವಾಹನ ಸವಾರರ ಹಾಗೂ ಪ್ರಯಾಣಿಕರ ಹಿತ ಕಾಪಾಡ ಬೇಕಿದೆ.
Kshetra Samachara
08/11/2020 01:45 pm