ವರದಿ: ವಿನೋದ ಇಚ್ಚಂಗಿ
ನವಲಗುಂದ: ಸಮಸ್ಯೆಗಳ ಬೆನ್ನು ಹತ್ತಿದರೆ ಅವು ಸಾಲು ಸಾಲಾಗಿ ಕಂಡು ಬರುತ್ತವೆ, ಆದ್ರೆ ಅವುಗಳಲ್ಲಿ ಚಿಕ್ಕದು ದೊಡ್ಡದು ಅಂದ್ರೆ ಈಗಿರುವ ಚಿಕ್ಕ ಸಮಸ್ಯೆಯೇ ನಾಳೆ ದೊಡ್ಡದಾಗುವುದರಲ್ಲಿ ಸಂಶಯವೇ ಇಲ್ಲಾ, ಹೌದು ಈ ಮಾತನ್ನು ನಾವು ಯಾಕೆ ಹೇಳ್ತಾ ಇದೀವಿ ಅಂದ್ರಾ..? ಈ ಸ್ಟೋರಿಯನ್ನು ನೀವೇ ನೋಡಿ...
ಮಳೆ ನಿಂತರು ಸಹ ಮಳೆ ಹನಿ ನಿಲ್ಲಲಿಲ್ಲ ಅನ್ನೋ ಗಾದೆ ಹಾಗೇ ಈಗಾ ಆಗಿರೋ ಸಮಸ್ಯೆ, ನವಲಗುಂದ ತಾಲೂಕಿನ ಬೆಳವಟಿಗಿ ಗ್ರಾಮದಿಂದ ಅಮರಗೋಳ ಗ್ರಾಮದ ವರೆಗೆ ನೀವು ಸಂಚಾರ ಮಾಡಿದರೆ, ಸಾಕು ಸಾಕಾಗಿ ಹೋಗುತ್ತೆ, ಯಾಕಂದ್ರೆ ಈ ಬಾರಿ ಸುರಿದ ಬಾರಿ ಮಳೆಯಿಂದಾಗಿ ರಸ್ತೆಗಳು ಕಿತ್ತು ಹೋಗಿವೆ ಆದ್ರೆ ಮಳೆಯಿಂದ ಕುಸಿದ ರಸ್ತೆ ಸೇತುವೆಗಳು ಈಗಲೂ ಕುಸಿಯುವ ಆತಂಕವನ್ನು ತೋರಿಸುತ್ತಿವೆ. ಒಂದು ಚಕ್ಕಡಿ ಅಥವಾ ಟ್ರ್ಯಾಕ್ಟರ್ ಕೂಡ ಹಾದು ಹೋಗಲು ಸ್ಥಳವಿಲ್ಲದಷ್ಟು ರಸ್ತೆ ಚಿಕ್ಕದಾಗಿದೆ. ಇನ್ನೂ ಇದೆ ರಸ್ತೆಯಲ್ಲಿರುವ ಚಿಕ್ಕ ಚಿಕ್ಕ ಸೇತುವೆಗಳು ಸಹ ಕುಸಿಯಲು ಶುರುವಾಗಿವೆ. ಏನಾದರೂ ದೊಡ್ಡ ವಾಹನ ಈ ರಸ್ತೆಗೆ ಬಂದದ್ದೇ ಆದಲ್ಲಿ ಅವಘಡ ತಪ್ಪಿದ್ದಲ್ಲಾ, ಇನ್ನೂ ಈ ಬಗ್ಗೆ ರೈತನೋರ್ವ ಹೇಳೋದು ಹೀಗೆ...
ಇನ್ನೂ ಒಂದು ವೇಳೆ ರಸ್ತೆ ಸಂಪೂರ್ಣ ಕುಸಿದಿದ್ದೆ ಆದಲ್ಲಿ ಇಲ್ಲಿನ ರೈತರು ತಮ್ಮ ಹೊಲಗಳಿಗೆ ಹೋಗಲಾಗದೆ ಪರದಾಟ ನಡೆಸುವಂತಹ ಪರಿಸ್ಥಿತಿ ಬರೋದಂತು ನಿಜಾ, ಹೀಗಾಗಿ ಆದಷ್ಟು ಬೇಗ ಈ ರಸ್ತೆಯ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕಿದೆ...
Kshetra Samachara
06/11/2020 10:38 pm