ಕುಂದಗೋಳ : ಈ ವರ್ಷ ಎಡೆಬಿಡದೆ ಸುರಿದ ಅತಿವೃಷ್ಟಿ ನಡುವೆಯೂ ಇಲ್ಲೊಂದು ಗ್ರಾಮ ಕುಡಿಯುವ ನೀರಿನ ಸಮಸ್ಯೆಗೆ ತುತ್ತಾಗಿದ್ದು ಗ್ರಾಮಕ್ಕಿದ್ದ ಕೆರೆಯೊಂದು ಕುಡುಕುರ ಅಡ್ಡೆಯಾಗಿ ಮಾರ್ಪಾಟಾಗಿದೆ ನೋಡಿ.
ಇದ್ಯಾವೂರಪ್ಪ ಅಂದ್ರಾ ಇದೇ ಸ್ವಾಮಿ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮ ಈ ಊರಲ್ಲಿರೋ ಶುದ್ಧ ಕುಡಿಯುವ ನೀರಿನ ಘಟಕ ವಾರದಲ್ಲಿ ಒಂದು ದಿನ ಆರಂಭವಾಗೋದೆ ಅಪರೂಪ ಇನ್ನು ಈ ಶುದ್ಧ ಕುಡಿಯುವ ನೀರಿನ ಘಟಕ ಮುಂದೆ ಜನರು ಬಹಿರ್ದೆಸೆ ಮಾಡುತ್ತಿದ್ದು ಸುತ್ತಲಿನ ಜನರಿಗೆ ಇಲ್ಲಿಗೆ ಬರೋಕೆ ಮನಸ್ಸಿಲ್ಲದಂತಾಗಿದೆ.
ಊರಿಗೆ ಇರೋ ಕೆರೆ ಕುಡುಕರಿಗೆ ಪ್ರೀಯವಾದ ಸ್ಥಳವಾಗಿದ್ದು ಎಲ್ಲಿ ನೋಡಿದರಲ್ಲಿ ಸಾರಾಯಿ ಪಾಕೆಟ್, ಗುಟ್ಕಾ, ಪ್ಲಾಸ್ಟಿಕ್ ಕಪ್ ಬಿದ್ದಿದ್ದು ನಿರ್ವಹಣೆ ಕೊರತೆಯಿಂದ ಆಳೆತ್ತರ ಕಸ ಬೆಳೆದು ಕೆರೆ ನೀರು ಸಂಪೂರ್ಣ ಕೆಟ್ಟಿದೆ. ಈ ಪರಿಣಾಮ ಗ್ರಾಮದ ಜನರಿಗೆ ಕರೆ ನೀರು ಕುಡಿಯಲು ಬಾರದಾಗಿದ್ದು ಗ್ರಾಮದ ಪ್ರತಿ ಓಣಿಗೆ ವಾರಕ್ಕೋಮ್ಮೆ ಮಾತ್ರ ಮಲಪ್ರಭಾ ನೀರು ಸರಬರಾಜು ಆಗುತ್ತಿದ್ದು ಅದೇ ನೀರನ್ನು ಎಂಟು ದಿನ ಕಾಯ್ದಿಟ್ಟು ಕುಡಿಯುವ ಜನರ ಕಷ್ಟಕ್ಕೆ ಇಂದಿಗೂ ಮುಕ್ತಿ ಸಿಕ್ಕಿಲ್ಲ ಈ ಬಗ್ಗೆ ಕಾಳಜಿ ವಹಿಸುವ ಅಧಿಕಾರಿಗಳು ಮೌನ ತಾಳಿದ್ದಾರೆ.
Kshetra Samachara
06/11/2020 02:03 pm