ಕಲಘಟಗಿ:ತಾಲೂಕಿನ ಮಡ್ಕಿಹೊನ್ನಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ಕಟ್ಟಿ ಎಂಟು ವರ್ಷಗಳಾಗಿದ್ದರು,ಉದ್ಘಾಟನೆ ಆಗದೆ ಪಾಳು ಬಿದ್ದಿದ್ದು ಸರಕಾರದ ಅನುದಾನ ವ್ಯರ್ಥವಾಗಿದೆ.
ಜಿಲ್ಲಾ ಪಂಚಾಯಿತಿಯ 2011-12 ನೇ ಸಾಲಿನ ಐ ಆರ್ ಡಿ ಎಫ್ ನಬಾರ್ಡ್ ಯೋಜನೆಯಲ್ಲಿ ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟನೆಯಾಗದೇ ಪಾಳು ಬಿದ್ದು ಸುತ್ತಲು ಗಿಡಗಂಟಿಗಳು ಬೆಳೆದಿವೆ,ಕಿಟಕಿ ಗ್ಲಾಸ್ ಗಳು ಒಡೆದು ಕಟ್ಟಡ ಹಾಳಾಗುತ್ತಿದೆ.2013 ರಲ್ಲಿಯೇ ನೂತನ ಕಟ್ಟಡ ಗ್ರಾ ಪಂ ಗೆ ಹಸ್ತಾಂತರಿಸಲಾಗಿದೆ.ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು,ನವಂಬರ್ ತಿಂಗಳ ಒಳಗಾಗಿ ಕಟ್ಟಡ ಉದ್ಘಾಟನೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಾ ಪಂ ಇ ಓ ಎಂ ಎಸ್ ಮೇಟಿ ಪ್ರತಿಕ್ರಿಯೆ ನೀಡಿದರು.
ಗ್ರಾ ಪಂ ನೂತನ ಕಟ್ಟಡ ಅನಾಥವಾಗಿದ್ದು, ಉದ್ಘಾಟನೆಯಾಗದೆ ಸರಕಾರದ ಅನುದಾನ ವ್ಯರ್ಥವಾಗುತ್ತಿದೆ.ಇನ್ನಾದರು ಸಂಬಂಧಪಟ್ಟ ಇಲಾಖೆ ಕಟ್ಟಡದ ಉದ್ಘಾಟನೆ ಮಾಡುವುದೇ ಎಂಬುದನ್ನು ಕಾದು ನೋಡ ಬೇಕಿದೆ.
Kshetra Samachara
06/11/2020 01:21 pm