ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ರಸ್ತೆ ಹೋಗಿ ಚರಂಡಿ ಯಾಯ್ತು ಕೊಳೆಚೆ ನೀರಿಗೆ ಮುಕ್ತಿ ಇಲ್ಲವಾಯ್ತು

ಕುಂದಗೋಳ : ಮನೆ ಮುಂದೆ ನಿತ್ಯವು ಚರಂಡಿ ಸೌಲಭ್ಯವಿರದೆ ಹರಿಯುವ ಕೊಳಚೆ ನೀರು, ಸೊಳ್ಳೆಗಳ ಕಾಟ, ರೋಗದ ಭೀತಿಯ ನಡುವೆ ಜೀವಿಸೋದಾದ್ರು ಹೇಗೆ ? ಹಿಗೇಂದು ಪ್ರಶ್ನೇ ಮಾಡುತ್ತಿರುವವರು ಕುಂದಗೋಳ ಪಟ್ಟಣದ 6 ನೇ ವಾರ್ಡ್ ಕಿಲ್ಲಾ ಓಣಿಯ ನಿವಾಸಿಗಳು.

ಕಿಲ್ಲಾ ಓಣಿಯ ಮೇಲಿಂದ ಹರಿದು ಬರುವ ನೀರು ಮುಂದೆ ಚರಂಡಿ ಸೌಲಭ್ಯವಿರದ ಕಾರಣ ಕ ಸಂಪೂರ್ಣ ರಸ್ತೆಗೆ ಆವರಿಸಿದ್ದು ಚರಂಡಿ ಯಾವ್ದೋ ರಸ್ತೆ ಯಾವ್ದೋ ಕಾಣದಾಗಿದೆ ಈ ಪರಿಣಾಮ ನಿತ್ಯ ಸಾರ್ವಜನಿಕ ಜೀವನಕ್ಕೆ ಎಲ್ಲಿಲ್ಲದ ತೊಂದರೆ ಎದುರಾಗಿದ್ದು ಅನಿವಾರ್ಯವಾಗಿ ಇದೇ ಕೊಳಚೆ ತುಂಬಿದ ರಸ್ತೆಯಲ್ಲೇ ಕಾಲಿಗೆ ರೋಗ ಅಂಟಿಸಿಕೊಂಡು ಜನ ಸಂಚಾರ ನಡೆದೆ ಇದೆ.

ಈ ದುಸ್ಥಿತಿ ಬಗ್ಗೆ ರೋಸಿಹೋಗಿರುವ ಅಲ್ಲಿನ ನಿವಾಸಿಗಳ ಎದುರಾಗಿರೋ ತೊಂದರೆ ಏನು ? ಎಂದು ಅವ್ರ ಮಾತಲ್ಲೇ ಕೇಳ್ಬೇಡಿ.

ಈ ಸಮಸ್ಯೆಯನ್ನ ಪಟ್ಟಣ ಪಂಚಾಯಿತಿ ಗಮನಕ್ಕೆ ತಂದಿರುವ ಜನಸಾಮಾನ್ಯರು ಚರಂಡಿ ನಿರ್ಮಾಣಕ್ಕೆ ಒತ್ತಾಯಿಸುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

05/11/2020 04:09 pm

Cinque Terre

39.32 K

Cinque Terre

0

ಸಂಬಂಧಿತ ಸುದ್ದಿ