ಕಲಘಟಗಿ: ಕಲಘಟಗಿ ತಾಲೂಕಿನ ಸೂರಶೇಟ್ಟಿಕೋಪ್ಪ ಗ್ರಾಮದಲ್ಲಿ ಸುಮಾರು 84 ಎಕರೆ ಹುಲ್ಲು ಗಾವಲಿನ ಪ್ರದೇಶದಲ್ಲಿ ಅಕ್ರಮವಾಗಿ ಬೆಳೆಗಳನ್ನು ಬೆಳೆದಿದ್ದು ಅತಿಕ್ರಮಣ ಮಾಡಿರುವ ಪ್ರದೇಶದಲ್ಲಿ ಹುಲ್ಲು ಗಾವಲು ಪ್ರದೇಶ ಎಂದು ಬೋರ್ಡ್ ಹಾಕಬೇಕು ಅಲ್ಲಿ ಯಾವದೇ ರೀತಿಯಾದ ಬೆಳೆಗಳನ್ನು ಬೆಳೆಯಲು ಬಿಡಬಾರದು ಎಂದು ಇಂದು ಕಲಘಟಗಿ ತಹಶೀಲ್ದಾರ್ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ರವರು ಆಗಮಿಸಿ ಇದರ ಬಗ್ಗೆ ತನಿಖೆ ನಡೆಸಲಾಗುವುದು ಅತಿಕ್ರಮಣ ಮಾಡಿದ ಹೊಲದಲ್ಲಿ ಇಗಾಗಲೆ ರೈತರು ಬೆಳೆಗಳನ್ನು ಬೆಳೆದಿದ್ದು ಅವುಗಳನ್ನು ನಾಶಮಾಡಲು ಸಾಧ್ಯವಿಲ್ಲ ಆದ್ದರಿಂದ ಒಂದು ತಿಂಗಳಲ್ಲಿ ಬೆಳೆಗಳನ್ನು ತೆಗೆದ ನಂತರ ಮುಂದೆ ಅಲ್ಲಿ ಯಾರಿಗೂ ಅವಕಾಶ ಕೋಡುವುದಿಲ್ಲ ಒಂದು ವಾರದಲ್ಲಿ ಆ ಪ್ರದೇಶದಲ್ಲಿ ಬೋರ್ಡ್ಬ ಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ ಮುರಳ್ಳಿಯವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಉದಯ ಗೌಡರ
Kshetra Samachara
23/09/2022 08:55 pm