ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: "ಚಾಕಲಬ್ಬಿಯಲ್ಲೇ ಬ್ಯಾಂಕ್ ಶಾಖೆ ತೆರೆಯಿರಿ"; ಗ್ರಾಮಸ್ಥರ ಅಹವಾಲು

ಕುಂದಗೋಳ : "ನಾವೆಲ್ಲ ಕುಂದಗೋಳ ಪಟ್ಟಣದ ಸಿಂಡಿಕೇಟ್ ಬ್ಯಾಂಕ್ ನಲ್ಲೇ ಹೆಚ್ಚಿನ ಖಾತೆ ಹಾಗೂ ವ್ಯವಹಾರ ಹೊಂದಿದ್ದೇವೆ. ನಮಗೆ ಈ ಬ್ಯಾಂಕ್‌ ಶಾಖೆಗೆ ಬರಲು 20 ಕಿ.ಮೀ. ದೂರ ಕ್ರಮಿಸಬೇಕು. ಇದು ನಮಗೆ ಕಷ್ಟಕರವಾಗಿರುವುದರಿಂದ ಚಾಕಲಬ್ಬಿ ಗ್ರಾಮದಲ್ಲೇ ಬ್ಯಾಂಕ್‌ ಶಾಖೆ ತೆರೆದರೆ ಅನುಕೂಲವಾಗುತ್ತೆ" ಎಂದು ಗ್ರಾಮಸ್ಥರು ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಬಳಿಕ ತಹಶೀಲ್ದಾರ್ ಕಚೇರಿಗೆ ತೆರಳಿದ ಗ್ರಾಮಸ್ಥರು‌, 2021-22ನೇ ಸಾಲಿನ ಬೆಳೆ ವಿಮೆ ಬಿಡುಗಡೆ ಹಾಗೂ ರೈತರ ಕೃಷಿ ಸಾಲ ಓಟಿಎಸ್ ಸಮಸ್ಯೆ ಬಗ್ಗೆ ತಹಶೀಲ್ದಾರ್ ಅಶೋಕ್ ಶಿಗ್ಗಾಂವಿ ಅವರಿಗೆ ವಿವರಿಸಿ ಸಹಕಾರ ಕೇಳಿದರು. ಈ ಸಂದರ್ಭ ಗ್ರಾಮಸ್ಥರ ಜತೆಗೆ ಕೃಷಿಕ ಸಮಾಜದ ರೈತ ಮುಖಂಡರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

16/06/2022 02:33 pm

Cinque Terre

22.99 K

Cinque Terre

0

ಸಂಬಂಧಿತ ಸುದ್ದಿ