ನವಲಗುಂದ: ರೈತರು ಈಗಾಗಲೇ ಮುಂಗಾರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಹೊಲಗಳನ್ನು ಹದಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಆದರೆ ಈಗ ನವಲಗುಂದ ಪಟ್ಟಣದಲ್ಲಿ ರೈತರಿಗೆ ಡೀಸೆಲ್ ಕೊರತೆಯ ಸಮಸ್ಯೆ ಶುರುವಾಗಿದೆ.
ರೈತರು ತಮ್ಮ ಹೊಲಗಳನ್ನು ಹದಗೊಳಿಸುವ ಅಥವಾ ಬಿತ್ತನೆ ಮಾಡುವ ಕೆಲಸಕ್ಕೆ ಹೋಗುವ ಬದಲು, ಡೀಸೆಲ್‌ಗಾಗಿ ನವಲಗುಂದ ಪಟ್ಟಣದ ಪೆಟ್ರೋಲ್ ಬಂಕ್‌ಗಳಲ್ಲಿ ಸಾಲುಸಾಲಾಗಿ ತಮ್ಮ ವಾಹನಗಳೊಂದಿಗೆ ಡೀಸೆಲ್ ಕ್ಯಾನ್‌ಗಳನ್ನು ಇಟ್ಟುಕೊಂಡು ಕಾಯುವ ನಿಂತ ದೃಶ್ಯ ಕಂಡುಬಂದಿದೆ. ಈ ಬಗ್ಗೆ ಪೆಟ್ರೋಲ್ ಬಂಕ್‌ಗೆ ಸಂಬಂಧ ಪಟ್ಟವರನ್ನು ಕೇಳಿದರೆ ಸತತವಾಗಿ ರೈತರು ಡೀಸೆಲ್ ಹಾಕಿಸಿಕೊಂಡು ಹೋಗುತ್ತಿರುವ ಹಿನ್ನೆಲೆ ಕೊರತೆ ಉಂಟಾಗಿದೆ. ಸಂಜೆ ನಂತರ ಡೀಸೆಲ್ ದೊರೆಯಲಿದೆ ಎಂದು ತಿಳಿಸಿದ್ದಾರೆ.
Kshetra Samachara
28/05/2022 03:06 pm