ಅಣ್ಣಿಗೇರಿ: ಪಟ್ಟಣದಲ್ಲಿರುವ ತಾಲೂಕು ಫಾರ್ಮರ್ ಪ್ರೋಡುಸರ್ ಕಂಪನಿ 2021ರಲ್ಲಿ ನೋಂದಣಿಯಾಗಿ 767 ಷೇರುಗಳನ್ನು ಹೊಂದಿದ್ದು, ಒಂದುವರೆ ಕೋಟಿ ರೂಪಾಯಿಗಳ ವಹಿವಾಟು ಹೊಂದಿದ್ದು, ಸೂರ್ಯಕಾಂತಿ,ಕುಸುಬೆ ಮತ್ತು ಶೇಂಗಾ ಬೆಳೆಗಳ ಎಣ್ಣೆಗಳನ್ನು ಉತ್ಪಾದಿಸಿ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವುದನ್ನು ಗಮನಿಸಿ ರಾಜ್ಯ ಸರ್ಕಾರ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದೆ ಎಂದು ತಾಲೂಕ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಅಧ್ಯಕ್ಷರಾದ ಪ್ರಕಾಶ್ ಅಂಗಡಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ವೇಳೆ ಮಾತನಾಡಿದ ಪ್ರಕಾಶ್ ಅಂಗಡಿಯವರು, ರಾಜ್ಯ ಸರ್ಕಾರ ಅಭಿನಂದನಾ ಪತ್ರ ನೀಡಿದ್ದರಿಂದ ನಮಗೆ ಇನ್ನು ಜವಾಬ್ದಾರಿ ಹೆಚ್ಚಿದಂತಾಗಿದೆ. ಗ್ರಾಹಕರಿಗೆ ಇನ್ನಷ್ಟು ಹೆಚ್ಚಿನ ಗುಣಮಟ್ಟದ ಸೇವೆಗಳನ್ನು ಒದಗಿಸಬೇಕಾಗಿರುತ್ತದೆ ಎಂದು ಮಾತನಾಡಿದರು.
ನಂದೀಶ ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ
Kshetra Samachara
11/05/2022 08:23 pm