ಕುಂದಗೋಳ : ಮಾರ್ಚ್ 16 ವರೆಗೂ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಶಿರೂರು ಬ್ರಿಡ್ಜ್ ನಿರ್ಮಾಣ ಕಾಮಗಾರಿ ಸಲುವಾಗಿ ಬ್ರಿಡ್ಜ್ ಮಾರ್ಗವನ್ನು ಬಂದ್ ಮಾಡಲಾಗಿದೆ.
ಆದರೆ, ಪರ್ಯಾಯ ರಸ್ತೆ ಇಲ್ಲದೆ ವಾಹನ ಸವಾರರು ಶಿರೂರು ಬ್ರಿಡ್ಜ್ ಪಕ್ಕದ ರೈತರ ಹೊಲಗಳಲ್ಲಿ ವಾಹನ ಓಡಿಸುವ ಕಾರಣ ನಿತ್ಯ ರೈತರ ಬೆಳೆ ಹಾಳಾಗುತ್ತಿರುವುದರಿಂದ ಇಂದು ಸಂಜೆ ರೈತರು ಎಲ್ಲಾ ವಾಹನಗಳನ್ನು ಹೊಲದಲ್ಲಿ ಘೇರಾವ್ ಹಾಕಿದ್ದಾರೆ.
ಈ ಸಂದರ್ಭದಲ್ಲಿ ಅದೇ ರಸ್ತೆ ಮಾರ್ಗವಾಗಿ ಪ್ರಯಾಣ ಬೆಳೆಸಿದ್ದ ಕಾಂಗ್ರೆಸ್ ಮುಖಂಡ ರಮೇಶ್ ಕೊಪ್ಪದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಶಿರೂರು ಬ್ರಿಡ್ಜ್ ಸಂಚಾರಕ್ಕೆ ಪರ್ಯಾಯ ಮಾರ್ಗ ನೀಡಿ ಇಲ್ಲವೆ. ರೈತರಿಗೆ ಆರ್ಥಿಕ ಸಹಾಯ ಮಾಡಿ ಎಂದು ಕರೆ ಮಾಡಿ ಪರಿಸ್ಥಿತಿ ವಿವರಿಸಿದ್ದಾರೆ.
ಬಳಿಕ ರೈತರು ಜಮೀನಿನಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನಗಳನ್ನು ತನ್ನ ಬೆಳೆ ಹಾಳಾದ್ರೂ, ಮಾನವೀಯತೆಯ ದೃಷ್ಟಿಯಿಂದ ಹೊಲದಲ್ಲೇ ಮಾರ್ಗ ಕಲ್ಪಿಸಿ ವಾಹನ ಸಂಚಾರಕ್ಕೆ ಅನುವು ಮಾಡಿದ್ದಾರೆ.
Kshetra Samachara
09/03/2022 10:09 pm