ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಕುಂದಗೋಳ : ಅತಿವೃಷ್ಟಿ ಶಾಪಕ್ಕೆ ತನ್ನ ಭೂಮಿಯಲ್ಲಿನ ಬೆಳೆ ಕಳೆದುಕೊಂಡ ರೈತ ಈಗ ಹೊಟ್ಟು ಮೇವಿನ ಅಭಾವದಿಂದ ತನ್ನ ಹೆಗಲಿಗೆ ಹೆಗಲು ಕೊಟ್ಟು ದುಡಿದು ಜಾನುವಾರುಗಳನ್ನೇ ಮಾರಲು ಮುಂದಾಗಿದ್ದಾನೆ.
ಆದ್ರೇ ! ಮಾರುಕಟ್ಟೆಯಲ್ಲಿ ಜಾನುವಾರುಗಳನ್ನು ಕೊಂಡುಕೊಳ್ಳುವವರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿ ದಲ್ಲಾಳಿಗಳು ಕೇಳುವ ಬೇಕಾಬಿಟ್ಟಿ ಬೆಲೆಗೆ ಜಾನುವಾರು ಮಾರಾಟವಾಗುತ್ತಿವೆ.
ಹೌದು ! ಈಗಾಗಲೇ ಅತಿವೃಷ್ಟಿ ಪರಿಣಾಮ ರೈತರ ಹೊಲದಲ್ಲಿನ ಬೆಳೆ ನಾಶವಾಗಿ ಜಾನುವಾರುಗಳನ್ನು ಸಲಹಲು ಹೊಟ್ಟು, ಮೇವು ಇಲ್ಲಾವಾದ್ರೇ, ಕೃಷಿಯನ್ನೇ ನಂಬಿದ ಕೆಲ ರೈತರಿಗೆ ಮನೆಯ ಆರ್ಥಿಕ ಪರಿಸ್ಥಿತಿಗಳು ಕಾಡ್ತಾ ಇವೆ. ಹೀಗಾಗಿ ರೈತರು ತಮ್ಮ ಮನೆಯಲ್ಲಿನ ಜಾನುವಾರುಗಳ ಮಾರಾಟಕ್ಕೆ ಮುಂದಾಗಿದ್ದಾರೆ.
ಕುಂದಗೋಳ ತಾಲೂಕಿನ ನೂಲ್ವಿ ಬಸವೇಶ್ವರ ಜಾನುವಾರು ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರಲ್ಲಿ ಜಾನುವಾರು ಮಾರುವವರೇ ಅಪಾರ, ಕೊಳ್ಳುವವರ ಸಂಖ್ಯೆ ವಿರಳವಾಗಿ ಲಕ್ಷ ಬೆಲೆ ಬಾಳುವ ಜೋಡಿ ಎತ್ತುಗಳಿಗೆ 60 ಸಾವಿರ ಬೆಲೆ, ಆಕಳು, ಎಮ್ಮೆಗೆ ಕೇವಲ 20 ಸಾವಿರ ರೂಪಾಯಿ ಬೆಲೆಯನ್ನ ದಲ್ಲಾಳಿಗಳು ನಿಗದಿ ಮಾಡುತ್ತಿದ್ದಾರೆ.
ರೈತರೇ ಜಾನುವಾರು ಮಾರಲು ಮುಂದಾದ ಪರಿಣಾಮ ಹಗ್ಗ, ಕಣ್ಣಿ, ಮೂಗುದಾರ, ಮಕ್ಕಾಡ ಹೀಗೆ ಜಾನುವಾರು ಸಲಕರಣೆ ಮಾರುವವರು ಗ್ರಾಹಕರ ಬರ ಎದುರಿಸುತ್ತಿದ್ದಾರೆ.
ಒಟ್ಟಾರೆ ಅನ್ನದಾತನಿಗೆ ಬಡೆದ ಅತಿವೃಷ್ಟಿಯ ಬರಸಿಡಲು, ಈದೀಗ ಮನೆಯ ಸದಸ್ಯನಂತಿದ್ದ ಜಾನುವಾರುಗಳನ್ನು ಮಾರುವ ಸ್ಥಿತಿಗೆ ತಂದಿದೆ.
Kshetra Samachara
28/01/2022 11:40 am