ಕುಂದಗೋಳ : ಈ ಸರ್ಕಾರ ಸರ್ಕಾರದ ಇಲಾಖೆಗಳು ಲಕ್ಷ ಲಕ್ಷ ಹಣ ಖರ್ಚು ಮಾಡಿ ಕಟ್ಟಿದ ಕೃಷಿ ಇಲಾಖೆಯ 500 ಮೆಟನ್ ಸಾಮರ್ಥ್ಯದ ಗೋದಾಮು ಉದ್ಘಾಟನೆ ಭಾಗ್ಯ ಕಾಣದೆ ಹಗಲು ಕುಡುಕರು ಅಡ್ಡೆಯಾಗಿ ಮಾರ್ಪಟ್ಟಿದೆ.
ಕುಂದಗೋಳ ತಾಲೂಕಿನ ಹೋಬಳಿ ಗ್ರಾಮದಲ್ಲೇ ಇಂತಹದ್ದೊಂದು ಸುಸಜ್ಜೀತ ಕಟ್ಟಡಕ್ಕೆ ಮಾಜಿ ಸಚಿವ ದಿ.ಸಿ.ಎಸ್.ಶಿವಳ್ಳಿಯವರು ಡಬ್ಲೂ.ಐ.ಎಫ್ ಯೋಜನೆಯಡಿ 2013-14ರಲ್ಲಿ ಅಡಿಗಲ್ಲಿನಿಟ್ಟು ಕಟ್ಟಡ 2019 ರಲ್ಲೇ ನಿರ್ಮಾಣವಾಗಿದ್ದರೂ ಇಂದಿಗೂ ಆಡಳಿತ ವ್ಯವಸ್ಥೆ ಸರ್ಕಾರದ ಬೇಜವಾಬ್ದಾರಿ ಕಾರಣ ಉಧ್ವಾಟನಾ ಭಾಗ್ಯವಿರದೆ, ಕ್ವಾರ್ಟರ್ ಬಾಟಲ್ ಗ್ಲಾಸ್ , ಚಿಂದಿ ಸಿಗರೇಟ್, ಎಲೆ ಅಡಿಕೆ ಗುಟ್ಕಾ ಕಲೆಗಳನ್ನು ತುಂಬಿಕೊಂಡು ಮುಳ್ಳು ಕಂಟಿಗಳ ಮಧ್ಯೆ ಸಿಲುಕಿ ದಾರಿಹೋಕರಿಗೆ ಬಹಿರ್ದೆಸೆ ತಾಣವಾಗಿದೆ.
ಗೋದಾಮು ಈ ರೀತಿ ಹಾಳಾಗುತ್ತಿರುವುದನ್ನು ಕಂಡ ಸ್ಥಳೀಯ ರೈತರು ಹಾಗೂ ರೈತ ಸಂಘಟನೆಗಳು ಗೋದಾಮು ಉಧ್ವಾಟನೆ ಮಾಡುವಂತೆ ಒತ್ತಾಯಿಸಿ ಹೋರಾಟದ ಎಚ್ಚರಿಕೆ ಸಹ ನೀಡುತ್ತಿದ್ದಾರೆ.
ಇನ್ನೂ ಸಂಶಿ ಭಾಗದ ಹಳ್ಳಿಯ ರೈತರ ಅನುಕೂಲಕ್ಕಾಗಿ ನಿರ್ಮಿಸಿದ ಗೋದಾಮು ಬಾಗಿಲು ಹಾಕಿದ ಕಾರಣ ರೈತರು ರಸ್ತೆ, ಕೆರೆ, ಕಟ್ಟೆ ಹಾಗೂ ಬಾಡಿಗೆ ಸ್ಥಳಗಳಲ್ಲಿ ಧವಸ ಧಾನ್ಯ ಸಂಗ್ರಹಿಸಿ ಮಾರುಕಟ್ಟೆ ತಲುಪಿಸುತ್ತಿದ್ದಾರೆ. ಒಟ್ಟಾರೆ 50 ಲಕ್ಷದ ಕಟ್ಟಡವನ್ನೂ ನಿರ್ಮಾಣಮಾಡಿ ಉದ್ಘಾಟನೆ ಮಾಡದೆ ಇರುವುದು ರೈತರಲ್ಲಿ ನಿರಾಶೆ ಭಾವನೆ ತಂದೊಡ್ಡಿದೆ.
Kshetra Samachara
26/10/2021 06:07 pm