ಅಣ್ಣಿಗೇರಿ : ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಮುಂಜಾನೆಯಿಂದಲೇ ಕಡಲೆಬೀಜ ಖರೀದಿಸಲು ರೈತರ ನೂಕುನುಗ್ಗಲು ಪ್ರಾರಂಭವವಾಗಿದೆ.ಬೀಜಕ್ಕಾಗಿ ಸಂಜೆಯಾದರೂ ರೈತರ ಸರದಿ ಮುಂದುವರೆದಿದೆ. ಹಿಂಗಾರು ಹಂಗಾಮಿನ ಮುಖ್ಯ ಬೆಳೆಗಳಾದ ಕಡಲೆ,ಜೋಳ, ಕುಸುಬಿ ಬೀಜಗಳು ಸಾಕಷ್ಟು ದಾಸ್ತಾನಿದೆ. ಆದರೂ ಸಹಿತ ರೈತರು ಇವುಗಳನ್ನು ಖರೀದಿಸಲು ಗದ್ದಲವನ್ನುಂಟು ಮಾಡುತ್ತಿದ್ದಾರೆ. ಈಗಾಗಲೇ ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ 1900 ಪ್ಯಾಕೆಟ್ ಗಳು ಬಂದಿವೆ.
ರೈತರಿಗೆ ಇನ್ನೂ ಹೆಚ್ಚಿನ ಕಡಲೆ,ಜೋಳ ಕುಸುಬಿ ಬೀಜಗಳನ್ನು ನೀಡಲು ಕೃಷಿ ಇಲಾಖೆ ಸಿದ್ಧವಾಗಿದೆ. ಪ್ರತಿಯೊಬ್ಬ ರೈತ 5 ಎಕರೆ ಜಮೀನ ಹೊಂದಿದ್ದಲ್ಲಿ 3 ಪ್ಯಾಕೆಟ್ ಕಡಲೆ, 2ಪ್ಯಾಕೆಟ್ ಜೋಳ ಖರೀದಿಸಬಹುದು. ಅಕ್ಟೋಬರ್ 30 ರ ಒಳಗೆ ಪ್ರತಿಯೊಬ್ಬ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕೃಷಿ ಅಧಿಕಾರಿ ಕೆ.ಎಸ್. ಪಾಟೀಲ್ ಪಬ್ಲಿಕ್ ತಿಳಿಸಿದರು.
Kshetra Samachara
04/10/2021 07:42 pm