ಕುಂದಗೋಳ: ತಾಲೂಕಿನ ಸಾವಿರಾರು ರೈತರಿಗೆ ಅಗತ್ಯ ಸೇವೆ, ಸಹಕಾರ ನೀಡಬೇಕಾದ ಕುಂದಗೋಳ ಕೃಷಿ ಇಲಾಖೆ ತನ್ನ ಸಿಬ್ಬಂದಿ ಕೊರತೆ ನೀಗಿಸಿಕೊಳ್ಳಲಾಗದೆ, ಸರಿಯಾದ ಸಮಯಕ್ಕೆ ರೈತರಿಗೆ ಸೌಲಭ್ಯ ನೀಡಲಾಗದೆ ರೈತರ ಕೆಂಗಣ್ಣಿಗೆ ಗುರಿಯಾಗಿದೆ.
ಕುಂದಗೋಳ ಕೃಷಿ ಇಲಾಖೆಯಲ್ಲಿ ಅಗತ್ಯವಿರುವ ಸಹಾಯಕ ಕೃಷಿ ಅಧಿಕಾರಿಗಳ 9 ಹುದ್ದೆ ಪೈಕಿ ಕೇವಲ ಒಬ್ಬ ಅಧಿಕಾರಿ ಇದ್ದರೆ, ರೈತ ಸಂಪರ್ಕ ಕೇಂದ್ರದಲ್ಲಿ ಒಬ್ಬ ಕೃಷಿ ಅಧಿಕಾರಿ ಕೊರತೆ ಇದೆ. ನಾಲ್ಕು ಡಾಟಾ ಆಪರೇಟರ್ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರೆ, ಗ್ರೂಪ್ ಡಿ ಎರಡು ಹುದ್ದೆ ಪೈಕಿ ಕೇವಲ ಒಬ್ಬರು ಕರ್ತವ್ಯದಲ್ಲಿದ್ದಾರೆ. ಇನ್ನು ಕೃಷಿ ಅನುವುಗಾರ ಯೋಜನೆ ಇದ್ದಾಗ ಇದ್ದ ಸಿಬ್ಬಂದಿ ಸದ್ಯ ಇಲ್ಲದೆ ಎಲ್ಲ ಕೆಲಸಗಳ ಹೊರೆ ಪ್ರಸಕ್ತ ಅಧಿಕಾರಿಗಳ ಮೇಲೆ ಬಿದ್ದಿದ್ದು ಆ ಹೊರೆ ರೈತನಿಗೆ ಮುಳುವಾಗಿದೆ.
ಒಟ್ಟಾರೆ ಕೃಷಿ ಇಲಾಖೆಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಖಾಲಿ ಇರುವ ಹುದ್ದೆಗಳಿಂದ ನಿತ್ಯ ಕಚೇರಿಗೆ ಬರುವ ರೈತರು ಸರಿಯಾದ ಸಮಯಕ್ಕೆ ಕೆಲಸವಾಗದೆ ಪರಿತಪಿಸುತ್ತಿದ್ದು ಈ ಬಗ್ಗೆ ಮೇಲಾಧಿಕಾರಿಗಳು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಿದೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
30/07/2021 09:50 am