ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಖಾಲಿ ಕುರ್ಚಿ ಮೇಲೆ ಅಧಿಕಾರ ನಡೆಸಿದೆ ತೋಟಗಾರಿಕೆ ಇಲಾಖೆ

ಕುಂದಗೋಳ : ಸರ್ಕಾರಿ ಇಲಾಖೆ ಕೆಲ್ಸಾ ಅಂದ್ರೇ ಹಂಗೇರಿ ತಿಂಗಳು ಗಟ್ಟಲೆ ಕಾಯ್ದು, ಅಧಿಕಾರಿಗಳಿಗೆ ದುಂಬಾಲು ಬಿದ್ರು ನಮ್ಮ ಕೆಲಸಾ ಆಗೋದೆ ಡೌಟು ! ಎಂದು ಶಪಿಸುವ ನಾವು ಈ ಕಚೇರಿಗಳಲ್ಲಿನ ಸಮಸ್ಯೆ ಕೆಳೋದೆ ಇಲ್ಲಾ.

ಹೌದು ! ಕುಂದಗೋಳ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಾರ್ಯಾಲಯ ಇಂತಹ ಸಮಸ್ಯೆಗಳಿಗೆ ಸನ್ನಿವೇಶಕ್ಕೆ ತುತ್ತಾಗಿದೆ.

ಯಾಕಪ್ಪಾ ಅಂದ್ರಾ ? ಇಲ್ನೋಡಿ ಈ ಖಾಲಿ ಖಾಲಿ ಕುರ್ಚಿಗಳನ್ನ ಇಡೀ ತಾಲೂಕಿನ ಸಮಸ್ಯೆಗೆ ಧ್ವನಿಯಾಗೋ ಕಚೇರಿ ಸಮರ್ಪಕ ಅಧಿಕಾರಿಗಳ ಕೊರತೆಯಿಂದ, ಈ ಖಾಲಿ ಖಾಲಿ ಕುರ್ಚಿ ಮೇಲೆ ಕರ್ತವ್ಯ ನಿರ್ವಹಿಸುವ ಅನಿವಾರ್ಯತೆಗೆ ಸಿಲುಕಿದೆ.

ತಾಲೂಕು ಮಟ್ಟದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಾರ್ಯಾಲಯದಲ್ಲಿ ಬರೋಬ್ಬರಿ 5 ಮುಖ್ಯವಾದ ಹುದ್ದೆಗಳೇ ಖಾಲಿ ಇವೆ. ಅದರಲ್ಲಿ ಹಿರಿಯ ಸಹಾಯಕ ನಿರ್ದೇಶಕರು ಈ ಕಚೇರಿಗೆ ಇಲ್ಲಾ, ಪ್ರಥಮ ದರ್ಜೆ ಲೆಕ್ಕ ಸಹಾಯಕರಿಲ್ಲಾ, ತೋಟಗಾರಿಕೆ ಸಹಾಯಕರ 2 ಹುದ್ದೆ ಖಾಲಿ ಇವೆ, ರೈತ ಸಂಪರ್ಕ ಕೇಂದ್ರಾಧಿಕಾರಿ ಹುದ್ದೆ ಖಾಲಿ ಇದೆ, ಹೀಗಾಗಿ ನಿತ್ಯ ಕಚೇರಿಗೆ ಬರೋ ಜನರ ಸರ್ಕಾರಿ ಕೆಲಸಕ್ಕೆ ಸ್ಪಷ್ಟ ಉತ್ತರ ಸಿಗೋದೆ ಇಲ್ಲಾ.

ಈ ಬಗ್ಗೆ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಪ್ರಭಾರಿ ತೋಟಗಾರಿಕೆ ಸಹಾಯಕ ಅಧಿಕಾರಿ ಮೇಲಾಧಿಕಾರಿಗಳಿಗೆ ಪತ್ರದ ಮೇಲೆ ಪತ್ರ ಬರೆದ್ರೂ ಇಂದಿಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲಾ ಇನ್ನು ಡೆಪಟೇಷನ್ ಮೇಲೆ ಬರೋ ಅಧಿಕಾರಿಗಳು ಅರ್ಧ ಹಾದಿಯಲ್ಲೇ ಮರಳಿ ಹೋಗಿ ಬಿಡ್ತಾರೆ.

ಈ ಬಗ್ಗೆ ಮಾನ್ಯ ಜನಪ್ರತಿನಿಧಿಗಳೇ ಗಮನಿಸಿ ಅನ್ನದಾತರ ಇಲಾಖೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಂಖ್ಯೆ ಹೆಚ್ಚೆಸಿ.

Edited By : Nagesh Gaonkar
Kshetra Samachara

Kshetra Samachara

29/01/2021 05:52 pm

Cinque Terre

51.89 K

Cinque Terre

1

ಸಂಬಂಧಿತ ಸುದ್ದಿ