ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಗುಣಮಟ್ಟದ ಬಿತ್ತನೆ ಬೀಜ ಪೂರೈಕೆ ಮಾಡಿ

ಧಾರವಾಡ: ಹತ್ತಿ ಬೀಜಗಳ ಗುಣಮಟ್ಟದ ಕೊರತೆಯಿಂದ ಇಳುವರಿ ಕೊರತೆ ಆಗುತ್ತಿದ್ದು, ಈ ಬಗ್ಗೆ ರೈತರಿಂದ ದೂರುಗಳಿವೆ. ಇದಲ್ಲದೇ ಬೇರೆ ಬೆಳೆಗಳ ಬಿತ್ತನೆ ಬೀಜಗಳ ಗುಣಮಟ್ಟಗಳ ಬಗ್ಗೆ ದೂರು ಬರುತ್ತಿದ್ದು, ಹೀಗಾಗಿ ಈ ಬಗ್ಗೆ ಪರಿಶೀಲಿಸಿ ಗುಣಮಟ್ಟದ ಹತ್ತಿ ಬೀಜ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಅಮೃತ ದೇಸಾಯಿ ಹೇಳಿದರು.

ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಸೋಮವಾರ ನಡೆದ ಧಾರವಾಡ ತಾಲೂಕಿನ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.

ಮಾವು ಇಳುವರಿ ಕಡಿಮೆ ಆಗುತ್ತಿದ್ದು, ಇಳುವರಿ ಹೆಚ್ಚಿಸುವತ್ತ ರೈತರಿಗೆ ಅಗತ್ಯ ಪ್ರೋತ್ಸಾಹ ನೀಡಬೇಕು. ಮಾವು ವಿಮೆ ನಿಗದಿತ ಸಮಯಕ್ಕೆ ರೈತರ ಖಾತೆಗೆ ಜಮೆ ಆಗಲು ಆಗಿರುವ ತೊಂದರೆ ಸರಿಪಡಿಸಬೇಕು ಎಂದರು‌.

ಭೂಸೇನಾ ನಿಗಮ ಹಾಗೂ ನಿರ್ಮಿತಿ ಕೇಂದ್ರಗಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಇವರಿಗೆ ಲಗಾಮು ಇಲ್ಲದಂತಾಗಿದ್ದು, ತಾವು ಮಾಡಿದ್ದೇ ಆಟ ಅನ್ನುವಂತಾಗಿದೆ. ಈ ಬಗ್ಗೆ ಸಾಕಷ್ಟು ದೂರು ಕೇಳಿ ಬರುತ್ತಿದ್ದು, ಪ್ರಾಮಾಣಿಕವಾಗಿ ಕೆಲಸದ ಬದಲು ನಿರ್ಲಕ್ಷ್ಯ ಹಾಗೂ ಗುಣಮಟ್ಟದ ಕೊರತೆಯ ಕೆಲಸ ಕಂಡು ಬರುತ್ತಿವೆ. ಇದು ನಿಮಗೆ ಹುಡುಗಾಟಿಕೆ ಆಗಿದೆಯೇ? ಗ್ರಾಮ ವಿಕಾಸ ಯೋಜನೆ ಅನುಷ್ಠಾನ ಸೇರಿ ಪ್ರಗತಿಯ ವರದಿ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿರುವ ಕಾರಣ ಹೊಲದಲ್ಲಿನ ಫಸಲು ಮನೆಗೆ ತರಲು ರೈತಾಪಿ ಸಮುದಾಯ ಸಂಕಷ್ಟ ಎದುರಿಸುವಂತಾಗಿದೆ. ಹೀಗಾಗಿ ಈ ಕೂಡಲೇ ಹೊಲ ಗದ್ದೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ದುರಸ್ತಿ ಕಾರ್ಯ ಕೈಗೊಳ್ಳಬೇಕು. ಈ ಮೂಲಕ

ರಸ್ತೆಗಳ ಸುಧಾರಣೆಗೆ ಆದ್ಯತೆ ಕೊಟ್ಟು ರೈತಾಪಿ ವರ್ಗದವರ ಕೃಷಿ ಪೂರಕ ಸಂಚಾರಕ್ಕೆ ಅನುವು ಮಾಡಿ ಕೊಡುವಂತೆ ಸೂಚನೆ ನೀಡಿದರು.

ಕೋಟೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳೇ ಇಲ್ಲ. ಇದರ ಜೊತೆಗೆ ಅಗತ್ಯ ಔಷಧೋಪಚಾರವೂ ಇಲ್ಲ. ಹೀಗಾಗಿ ರೋಗಿಗಳು ಕೇಂದ್ರದತ್ತ ಸುಳಿಯದಂತಾಗಿದೆ. ಇದಲ್ಲದೇ ಗ್ರಾಮದ ಅಂಗನವಾಡಿ ಕಾರ್ಯಕರ್ತರು ರಾಜಕೀಯ ಮಾಡುತ್ತಿದ್ದಾರೆ. ಇದಲ್ಲದೇ ಜಿಲ್ಲಾಸ್ಪತ್ರೆಯಲ್ಲಿ 8-10 ಸಾವಿರಕ್ಕೆ ಯಾರಿಗೆ ಬೇಕಾದವರಿಗೂ ಶೇ.75 ರಷ್ಟು ವಿಕಲಚೇತನ ಇರುವ ಬಗ್ಗೆ ಪ್ರಮಾಣ ಪತ್ರ ಸಿಗುವಂತಾಗಿದೆ. ಇದರಿಂದ ಸೌಲಭ್ಯಗಳು ಅನರ್ಹರ ಪಾಲಾಗುತ್ತಿವೆ ಎಂದು ಕೆಡಿಪಿ ತ್ರೈಮಾಸಿಕ ಸಭೆಯ ನಾಮನಿರ್ದೇಶಿತ ಸದಸ್ಯ, ಕೋಟೂರಿನ ಗ್ರಾ.ಪಂ.ನ ಮಾಜಿ ಅಧ್ಯಕ್ಷ ಶಂಕರಯ್ಯ ಮಠಪತಿ ಸಭೆಯ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಶಾಸಕರು, ಸಂಬಂಧಪಟ್ಟವರಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಇದಲ್ಲದೇ ಮಠಪತಿ ಅವರ ದೂರಿಯ ಅನ್ವಯ, ಕೋಟೂರು, ಯಾದವಾಡ ಗ್ರಾ.ಪಂ. ಆಡಳಿತಾಧಿಕಾರಿಗಳಿಗೆ ಸರಿಯಾಗಿ ಕಾರ್ಯ ನಿರ್ವಹಣೆ ಮಾಡುವಂತೆ ಶಾಸಕರು ಸೂಚಿಸಿದರು.

ತಾ.ಪಂ.ಅಧ್ಯಕ್ಷ ರವಿವರ್ಮ ಪಾಟೀಲ, ಉಪಾಧ್ಯಕ್ಷೆ ಫಕೀರವ್ವ ನಾಯಕ, ಜಿ.ಪಂ.ಸದಸ್ಯರಾದ ಕಲ್ಲಪ್ಪ ಪುಡಕಲಕಟ್ಟಿ, ಚನ್ನಬಸಪ್ಪ ಮಟ್ಟಿ, ತಹಶೀಲ್ದಾರ ಡಾ.ಸಂತೋಷ ಬಿರಾದಾರ, ತಾ.ಪಂ.ಕಾದ್ರೋಳಿ ಸೇರಿದಂತೆ ತಾಲೂಕುಮಟ್ಟದ ಅಧಿಕಾರಿಗಳು ಇದ್ದರು.

Edited By : Nagaraj Tulugeri
Kshetra Samachara

Kshetra Samachara

25/01/2021 08:47 pm

Cinque Terre

31.02 K

Cinque Terre

0

ಸಂಬಂಧಿತ ಸುದ್ದಿ