ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ವಿದ್ಯುತ್ ಬೆಲೆ ಏರಿಕೆ ಹೆಸ್ಕಾಂ ಕಚೇರಿಗೆ ಸಗಣಿ ಎಸೆದು ಕಿಸಾನ್ ಕಾಂಗ್ರೆಸ್ ಆಕ್ರೋಶ

ಕುಂದಗೋಳ : ರಾಜ್ಯ ಸರ್ಕಾರ ವಿದ್ಯುತ್ ದರ ಏರಿಸಿರುವುದನ್ನು ಖಂಡಿಸಿ, ಹಾಗೂ ಕುಂದಗೋಳ ತಾಲೂಕಿನ ಹಳ್ಳಿಗಳಲ್ಲಿ ಕುಟುಂಬಗಳಿಗೆ ನೀಡಲಾಗುವ ವಿದ್ಯುತ್ ಸೌಲಭ್ಯದಲ್ಲಿನ ಸಮಸ್ಯೆಗಳ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಂಡು ವಿದ್ಯುತ್ ದರ ಇಳಿಸಬೇಕು. ಹಾಗೂ ಕೊರೊನಾ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿ ವಿದ್ಯುತ್ ಬಿಲ್ ಪಾವತಿಸದ ಬಡವರ ಮನೆ ವಿದ್ಯುತ್ ಸೌಲಭ್ಯ ಸ್ಥಗಿತ ಗೊಳಿಸಿದಂತೆ ಕುಂದಗೋಳ ತಾಲೂಕ ಕಿಸಾನ್ ಕಾಂಗ್ರೆಸ್ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಸಿದರು.

ಕುಂದಗೋಳ ಪಟ್ಟಣದ ಗಾಳಿ ಮರೇಮ್ಮದೇವಿ ದೇವಸ್ಥಾನದಿಂದ ಹೆಸ್ಕಾಂ ಕಚೇರಿಯವರೆಗೂ ಪಾದಯಾತ್ರೆ ನಡೆಸಿದ ತಾಲೂಕು ಕಾಂಗ್ರೆಸ್ ಕಾರ್ಯಕರ್ತರು ಹೆಸ್ಕಾಂ ಕಚೇರಿಗೆ ಸಗಣಿ ಎಸೆದು ಆಕ್ರೋಶ ಹೊರ ಹಾಕಿದರು.

ಸರ್ಕಾರದ ಈ ನಿಲುವಿನ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರ ಆದೇಶದ ಮೇರೆಗೆ ಪ್ರತಿಭಟನೆ ನಿರತರು ಹುಬ್ಬಳ್ಳಿ ಲಕ್ಷ್ಮೇಶ್ವರ ಹೆದ್ದಾರಿ ಗುಂಟ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

Edited By : Manjunath H D
Kshetra Samachara

Kshetra Samachara

27/11/2020 03:58 pm

Cinque Terre

50.84 K

Cinque Terre

1

ಸಂಬಂಧಿತ ಸುದ್ದಿ