ಕುಂದಗೋಳ : ನೈಋತ್ಯ ರೈಲ್ವೇ ವಲಯದ ಹಳಿಗಳ ಡಬಲ್ ಕಾಮಗಾರಿಗಾಗಿ ನಿರ್ಮಿಸಿದ ರೈಲ್ವೇ ಬ್ರೀಡ್ಜ್ ರೈತಾಪಿ ವರ್ಗಕ್ಕೆ ಮಾರಕವಾಗಿ ನಿತ್ಯ ರೈತಾಪಿ ಚಟುವಟಿಕೆ ಹಾಗೂ ವಾಹನ ಸಂಚಾರಕ್ಕೆ ಪರದಾಟ ಇಂದಿಗೂ ತಪ್ಪಿಲ್ಲ.ಇದೋ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಿಂದ ಹಿರೇಹರಕುಣಿಗೆ ಸಂಪರ್ಕ ಕಲ್ಪಿಸುವ 5 ಕಿ.ಮೀ ರಸ್ತೆಯ ಧಾರುಣ ಕಥೆ ಸತತ ಮೂರು ವರ್ಷಗಳ ಕಾಲ ಎದುರಾದ ಅತಿವೃಷ್ಟಿಗೆ ರಸ್ತೆ ಸಂಪೂರ್ಣ ಹಾಳಾಗಿದ್ದು ಒಂದೆಡೇ ಅರ್ಧ ರಸ್ತೆ ಕುಸಿದು ಹಳ್ಳಕ್ಕೆ ಜಾರಿದೆ.
ಈ ಕಾರಣ ಬೃಹತ್ ಗಾತ್ರದ ವಾಹನ ಸಂಚಾರಕ್ಕೆ ಸಂಚಕಾರ ಉಂಟಾಗಿದ್ದು ಚಕ್ಕಡಿ, ಎತ್ತುಗಳಿಗೆ ಸಾಗಾಟಕ್ಕೆ ಭಯ ಉಂಟಾಗಿ ರಾತ್ರಿ ಸಂಚಾರ ಅಪಘಾತಕ್ಕೆ ಕಾಯ್ದಂತಿದೆ ಇನ್ನೂ ರೈಲ್ವೇ ಬ್ರೀಡ್ಜ್ ಕೆಳಗೆ ಸಂಗ್ರಹವಾದ ನೀರು ವಾಹನ ಸವಾರರಿಗೆ ತಲೆ ನೋವಾಗಿ ಪರಿಣಮಿಸಿದ್ದು ಬೈಕ್ ಸವಾರರು ಇಲ್ಲಿ ಅಪಘಾತಕ್ಕೆ ಇಡಾಗಿದ್ದರೇ ಟ್ರ್ಯಾಕ್ಟರ್ ಸೇರಿದಂತೆ ಇತರೆ ವಾಹನಗಳು ಈ ರಸ್ತೆ ಬ್ರೀಡ್ಜ್ ಅವ್ಯವಸ್ಥೆಗೆ ಸಿಲುಕಿ ಹಾಳಾಗಿ ಹೋಗಿವೆ.
ಇನ್ನೂ ಹಿರೇಹಕುಣಿ, ತರ್ಲಘಟ್ಟ ಜನರು ಲಕ್ಷ್ಮೇಶ್ವರ ಹೋಗಲು ಈ ಮಾರ್ಗವನ್ನೇ ಅನುಸರಿಸಿದ್ದು ಕಳೆದ ವರ್ಷ ಅಧಿಕಾರಿಗಳಿಗೆ ಹೇಳಿ ರಸ್ತೆ ದುರಸ್ತಿ ಮಾಡುಲ ಹೇಳಿದ್ರೂ ಗಮನಿಸಿದ ಕಾರಣ ನಾವೇ ತಾತ್ಕಾಲಿಕವಾಗಿ ಸರಿಪಡಿಸಿದ್ದೇವು ಈ ವರ್ಷ ಏನ್ಮಾಡೋದು ಎಂದು ಅಳಲು ತೋಡಿಕೊಂಡಿದ್ದಾರೆ.
Kshetra Samachara
19/10/2020 02:32 pm