ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಅಗ್ನಿಶಾಮಕ ತುರ್ತು ವಾಹನಕ್ಕೆ ಅಡ್ಡಿಯಾದ ರೈಲ್ವೇ ಗೇಟ್!

ಕುಂದಗೋಳ: ಅಗ್ನಿ ಅವಘಡ ನಂದಿಸಲು ಸರೈನ್ ಹಾಕಿ ಹೊರಟ ಅಗ್ನಿಶಾಮಕ ದಳದ ವಾಹನವೊಂದು ರೈಲ್ವೆ ಗೇಟ್ ಹಾಕಿದ ಪರಿಣಾಮ ಸರಿಯಾದ ಸಮಯಕ್ಕೆ ಸ್ಥಳ ತಲುಪಲಾಗದ ಘಟನೆ ಕುಂದಗೋಳದಲ್ಲಿ ನಡೆದಿದೆ.

ಹೌದು ! ಇಂದು ಸಂಜೆ ಕುಂದಗೋಳ ಪಟ್ಟಣದ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಹತ್ತಿರದ ಹರಭಟ್ಟ ಕಾಲೇಜು ಕಾಂಪೌಂಡ್ ಬಳಿಯ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸ್ಥಳೀಯರು ಅಗ್ನಿಶಾಮಕ ವಾಹನಕ್ಕೆ ಕರೆ ಮಾಡಿದ್ದಾರೆ.

ಆ ಬೆಂಕಿ ನಂದಿಸಲು ಎಪಿಎಂಸಿಯ ಅಗ್ನಿಶಾಮಕ ಠಾಣೆಯಿಂದ ಹೊರಟ ವಾಹನ ಬರೋಬ್ಬರಿ 15 ನಿಮಿಷ ಕಡಪಟ್ಟಿ ಮಾರ್ಗದ ರೈಲ್ವೆ ಗೇಟ್ ಹಾಕಿದ ಪರಿಣಾಮ ಸೈರನ್ ಹಾಕಿಕೊಂಡು ನಿಲ್ಲುವ ಅಸಹಾಯಕ ಸ್ಥಿತಿಯಲ್ಲಿ ಕಾಯುವ ಪ್ರಸಂಗ ಎದುರಾಯಿತು. ಒಂದು ಪ್ಯಾಸೆಂಜರ್ ಒಂದು ಗೂಡ್ಸ್ ರೈಲು ಹೋಗುವರೆಗೂ ಕಾಯ್ದು, ಆ ಮೇಲೆ ಟ್ರಾಫಿಕ್ ಕಿರಿ ಕಿರಿ ನಡುವೆ ಓಡಿದ ಅಗ್ನಿಶಾಮಕ ವಾಹನ ಅದೃಷ್ಟವಶಾತ್ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು.

ಆದ್ರೇ.! ನಾಳೆ ಇದೆ ಬೆಂಕಿ ಕೆನ್ನಾಲಿಗೆ ಹೆಚ್ಚಾಗಿದ್ದರೆ, ಅಥವಾ ರೋಗಿ ಹೊತ್ತು ಆಂಬುಲೆನ್ಸ್ ಬಂದ್ರೇ ಕಥೆ ಏನು? ರೈಲ್ವೆ ಅಧಿಕಾರಿಗಳೇ ಜನಪ್ರತಿನಿಧಿಗಳೇ ನೀವೆ ಉತ್ತರಿಸಿ. ಇಂದಿನ ಪರಿಸ್ಥಿತಿ ನೋಡಿ ಪಾಠ ಕಲಿತು ವ್ಯವಸ್ಥೆ ಸುಧಾರಿಸಿ ಎಂಬುದು ಪಬ್ಲಿಕ್ ನೆಕ್ಸ್ಟ್ ಆಶಯ.

ಶ್ರೀಧರ ಪೂಜಾರ

Edited By : Nagesh Gaonkar
Kshetra Samachara

Kshetra Samachara

31/03/2022 10:15 pm

Cinque Terre

47.89 K

Cinque Terre

3

ಸಂಬಂಧಿತ ಸುದ್ದಿ