ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ- ನೀರನ ಪೈಪ್ ಒಡೆದು ಪೆಟ್ರೋಲ್ ಬಂಕ್ ಗೆ ನುಗ್ಗಿದ ನೀರು! ಮಾಲೀಕ ಕಂಗಾಲು

ಹುಬ್ಬಳ್ಳಿ- ಕುಡಿಯುವ ನೀರಿನ ಪೈಪು ಒಡೆದು ಪೆಟ್ರೋಲ್ ಬಂಕ್ ಒಳಗಡೆ ನೀರು ನುಗ್ಗಿದ ಘಟನೆ ನಗರದ ದೇಸಾಯಿ ಸರ್ಕಲ್ ಬಳಿ ನಡೆದಿದೆ...

ಪೆಟ್ರೋಲ್ ಬಂಕ್ ರಸ್ತೆ ಪಕ್ಕದಲ್ಲಿರುವ, ಕುಡಿಯುವ ನೀರಿನ ಪೈಪ್ ಒಡೆದ ಪರಿಣಾಮ ಬಂಕ್‌ ತುಂಬಾ ನೀರು ತುಂಬಿದ್ದು ಮಾಲೀಕರಲ್ಲಿ ಆತಂಕ‌ ಮೂಡಿಸಿದೆ.

ಇನ್ನು ನೀರಿನ ಪೈಪ್ ಒಡೆದ ತಕ್ಷಣವೇ ಮಹಾನಗರ ಪಾಲಿಕೆ ಹಾಗೂ ಜಲಮಂಡಳಿ ಸಿಬ್ಬಂದಿಗೆ ಕರೆ ಮಾಡಿ ತಿಳಿಸಿದರು ಸಹ ಅವರು ಬೆಜವಾಬ್ದಾರಿತನ ತೋರಿಸಿದ್ದಾರೆ ಎಂದು ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲದೆ ನೀರಿನ ಅಭಾವ ಜಾಸ್ತಿಯಾಗಿ ಪೆಟ್ರೋಲ್ ಟಾಕಿಯಲ್ಲಿ‌ ನೀರು ನುಗ್ಗಿರು ಸಂಶಯ ವ್ಯಕ್ತವಾಗಿದ್ದು, ಲಕ್ಷಾಂತರ ಮೌಲ್ಯದ ಪೆಟ್ರೋಲ್ ಡೀಸೆಲ್ ಹಾನಿಯಾಗುತ್ತೆ. ಇನ್ನ ಈ ಘಟನೆಗೆ ಸಂಬಂಧ ಪಟ್ಟ ಅಧಿಕಾರಿಗಳು ಹೊಣೆ ಎಂದು ಆರೋಪ ಮಾಡಿದ್ದಾರೆ....

Edited By : Manjunath H D
Kshetra Samachara

Kshetra Samachara

02/11/2020 09:28 pm

Cinque Terre

58.92 K

Cinque Terre

7

ಸಂಬಂಧಿತ ಸುದ್ದಿ