ಧಾರವಾಡ: ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಆವರಣ ಇಂದು ಜನರಿಂದ ತುಂಬಿ ತುಳುಕುತ್ತಿತ್ತು. ಅದಕ್ಕೆ ಕಾರಣ NDRF ತಂಡ.
ಹೌದು! ಕಟ್ಟಡ ದುರಂತ ನಡೆದಾಗ ಅದರ ಅವಶೇಷಗಳಡಿ ಸಿಲುಕಿದ ಜನರನ್ನು ಯಾವ ರೀತಿ ರಕ್ಷಣೆ ಮಾಡಬೇಕು, ಕಟ್ಟಡದ ಮೇಲ್ಭಾಗದಲ್ಲಿ ಸಿಕ್ಕಿ ಹಾಕಿಕೊಂಡ ಜನರನ್ನು ರೋಪ್ ಮೂಲಕ ಯಾವ ರೀತಿ ಕೆಳಗೆ ಇಳಿಸಬೇಕು ಎಂಬುದರ ಕುರಿತು NDRF ತಂಡದವರು ಅಣಕು ಪ್ರದರ್ಶನ ಮಾಡಿ ಜನರಿಗೆ ತಮ್ಮ ಕಾರ್ಯವೈಖರಿ ಬಗ್ಗೆ ತಿಳಿಸಿಕೊಟ್ಟರು.
ಸ್ವತಃ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ, ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರು NDRF ತಂಡದ ಅಣಕು ಪ್ರದರ್ಶನವನ್ನು ವೀಕ್ಷಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ್
ಇನ್ನು ತಮ್ಮ ತಂಡದ ಅಣಕು ಪ್ರದರ್ಶನದ ಬಗ್ಗೆ ಮಾಹಿತಿ ನೀಡಿದ NDRF ತಂಡದ ಡೆಪ್ಯುಟಿ ಕಮಾಂಡೆಂಟ್ ಸುಖೇಂದ್ರ ದತ್ತಾ
ರಾಷ್ಟ್ರಿಯ ವಿಪತ್ತು ನಿರ್ವಹಣಾ ತಂಡ, ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಈ ಅಣಕು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. NDRF ತಂಡದವರು ನಡೆಸಿದ ರಕ್ಷಣಾ ಕಾರ್ಯ ಧಾರವಾಡದ ಜನತೆ ತುದಿಗಾಲ ಮೇಲೆ ನಿಂತು ನೋಡುವಂತೆ ಮಾಡಿತು.
Kshetra Samachara
30/10/2020 05:51 pm