ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹತ್ರಾಸ್ ಘಟನೆ: ಸಂತ್ರಸ್ತೆಯ ಕುಟುಂಬಕ್ಕೆ ಸಿಗದ ನ್ಯಾಯ

ಧಾರವಾಡ: ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ದಲಿತ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದು ಇಷ್ಟು ದಿನಗಳು ಕಳೆದರೂ ಆ ಯುವತಿ ಕುಟುಂಬಕ್ಕೆ ಇದುವರೆಗೂ ನ್ಯಾಯ ಸಿಗದೇ ಇರುವುದನ್ನು ಖಂಡಿಸಿ ಎಐಎಮ್ಎಸ್ಎಸ್ ಮಹಿಳಾ ಸಂಘಟನೆ ಸದಸ್ಯೆಯರು ಗುರುವಾರ ಧಾರವಾಡದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಹತ್ರಾಸ್ ನಲ್ಲಿ ಯುವತಿ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಅಲ್ಲಿನ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ.

ಆ ಯುವತಿ ಮೇಲೆ ಕಾಮಾಂಧರು ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಹತ್ಯೆ ಮಾಡಿದಾಗಲೂ ಅಲ್ಲಿನ ಸರ್ಕಾರ ಆ ಕಾಮುಕರ ಮೇಲೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ದುರದೃಷ್ಟಕರ.

ಹೀಗಾಗಿಯೇ ಮಹಿಳೆಯರ ಮೇಲೆ ದಿನೇ ದಿನೇ ದೌರ್ಜನ್ಯಗಳು ನಡೆಯುತ್ತಿವೆ. ಕೂಡಲೇ ಉತ್ತರ ಪ್ರದೇಶ ಸರ್ಕಾರ ಕೃತ್ಯವೆಸಗಿದ ಕಾಮುಕರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕಲ್ಪಿಸಿಕೊಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Edited By : Manjunath H D
Kshetra Samachara

Kshetra Samachara

29/10/2020 01:42 pm

Cinque Terre

15.97 K

Cinque Terre

0

ಸಂಬಂಧಿತ ಸುದ್ದಿ