ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಹುದುಗಿ ಹೋಗಿದೆ ಚರಂಡಿ ಹೂಳು ತೆಗೆಸ್ರೀ ಪುರಸಭೆ ಅಧಿಕಾರಿಗಳೇ

ಅಣ್ಣಿಗೇರಿ : ತಮ್ಮ ವಾಸದ ಮನೆಗಳ ಪಕ್ಕದಲ್ಲೇ ಹರಿಯುವ ಕೊಳಚೆ ತುಂಬಿದ ಚರಂಡಿ, ಸುತ್ತಲೂ ಹಂದಿಗಳ ಕಾಟ, ಮಕ್ಕಳ ಮರಿ ಓಡಾಡೋದೆ ಕಷ್ಟ, ಗಬ್ಬುವಾಸನೆ, ಇದೆಲ್ಲ ಏನಪ್ಪಾ ಅಂದ್ರಾ ? ಸ್ವಾಮಿ ಇದುವೇ ಸತತ ಐದು ವರ್ಷಗಳಿಂದ ಬನಶಂಕರಿ ನಗರದ ನಿವಾಸಿಗಳು ಅನುಭವಿಸುತ್ತಿರೋ ವ್ಯಥೆ.

ಅಣ್ಣಿಗೇರಿ ಪಟ್ಟಣದ ಬನಶಂಕರಿ ನಗರದ ಅವ್ಯವಸ್ಥೆಯ ಕೂಪವಾಗಿದ್ದು ಸುತ್ತಲಿನ ಜೀವನ ನಿರ್ವಹಣೆ ಕಷ್ಟವಾಗಿ ರೋಗಕ್ಕೆ ತುತ್ತಾಗುತ್ತಿದ್ದಾರೆ ಕಾರಣ ಪಕ್ಕದಲ್ಲೇ ಕೊಳಚೆ ಪ್ಲಾಸ್ಟಿಕ್ ತುಂಬಿ ಇಡೀ ಪಟ್ಟಣದ ತ್ಯಾಜ್ಯ ಹೊತ್ತು ತರೋ ಕಾಲುವೆ ಇಲ್ಲಿನ ಜನರಿಗೆ ರೋಗದ ಭೀತಿ ತಂದೊಡ್ಡಿದೆ ಈ ಬಗ್ಗೆ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳಿಗೆ ಕೈ ಮುಗಿದು ಕೇಳಿದ್ರೂ ಚರಂಡಿ ಸ್ವಚ್ಚ ಮಾಡಿಲ್ಲ.

ಈ ಚರಂಡಿಯಲ್ಲಿ ಆಟ ಆಡುತ್ತ ಬಿದ್ದ ಮಕ್ಕಳಿಗೆ ಲೆಕ್ಕವಿಲ್ಲ ಹಾಗೂ ಹಿಡಿ ಗಾತ್ರದ ಸೊಳ್ಳೆಗಳು ಜನರ ಜೀವ ಹಿಂಡುತ್ತಿದ್ದು ನಿತ್ಯ ಇಂತಹ ದುಸ್ಥಿತಿಯಲ್ಲೇ ಬದುಕಬೇಕಾದ ಜನರು ಈ ಚರಂಡಿಗೆ ಶುಚಿಗೊಳಿಸಿ ಮೇಲೆ ಕಾಂಕ್ರೀಟ್ ಹಾಕಿಸಿ ಜನರ ಬದುಕಿಗೆ ಅನುಕೂಲ ಮಾಡುವಂತೆ ಮೋರೆ ಇಟ್ಟಿದ್ದಾರೆ.

Edited By : Manjunath H D
Kshetra Samachara

Kshetra Samachara

27/10/2020 08:17 pm

Cinque Terre

13.13 K

Cinque Terre

1

ಸಂಬಂಧಿತ ಸುದ್ದಿ