ಕುಂದಗೋಳ : ಸ್ವಾಮಿ ಈ ಹಳ್ಯಾಗ ಮಣ್ಣು ,ಕೆಸರು, ಗುಂಡಿಗಳೇ ತುಂಬಿ ಹಾಳಾಗಿರೋ ರಸ್ತೆ ಸಂಚಾರ ಸಾಕಾಗಿ ಈ ಗುಡೇನಕಟ್ಟಿ ಗ್ರಾಮಸ್ಥರು ನಮ್ಮ ಎಂಪಿ ಸಾಹೇಬ್ರು ಪ್ರಲ್ಹಾದ ಜೋಶಿವರೆಗೂ ಹೋಗಿ ಮನವಿ ಮಾಡಿ ಗುಡೇನಕಟ್ಟಿ ಅಲ್ಲಾಪುರಕ್ಕ ಸಂಪರ್ಕ ಮಾಡೋ 5 ಕಿ.ಮೀ ರಸ್ತೆ ದುರಸ್ತಿ ಮಾಡಸ್ರೀ ಅಂತ್ಹೇಳಿ ಮನವಿ ಕೊಟ್ಟು ಆರು ತಿಂಗಳು ಕಳದ್ರೂ ಯಾವ ಅಧಿಕಾರಿ ಯಾಗ್ಲಿ ಯಾವ ಜನಪ್ರನಿಯಾಗ್ಲಿ ಹೊಳ್ಳಿ ನೋಡಿಲ್ಲ ನೋಡ್ರಿ.
ಹಿಂಗ್ಯಾಗಿ ಹೊಲದಾಗಿ ಬೆಳದಿರೋ ಮಾಲು ಮುದ್ದಿ ಹೆಂಗ್ ತರೋದು ಈ ವರ್ಷ ಜನಪ್ರತಿನಿಧಿಗಳನ್ನ ನೆಚ್ಚಿದ್ರ ಕೆಲ್ಸಾ ಆಗೋಲ್ಲಾ ನಡಿ ಅಂತ್ಲಾಗ ಅಂತ್ಹೇಳಿ ಈ ಗುಡೇನಕಟ್ಟಿ ಗ್ರಾಮಸ್ಥರೇ ಸ್ವಂತ ಹಣದಾಗ ಬರೋಬ್ಬರಿ 5 ಕಿ.ಮೀ ತಗ್ಗು, ಗುಂಡಿ, ಬಿದ್ದಿರೋ ರಸ್ತೆ ಮುಚ್ಚಿ ತಾತ್ಕಾಲಿಕ ಎಂಬಂತೆ ತಮ್ಮ ಹೊಲದಾಗಿನ ಫಸಲು ಅವ್ರ ಮನೀಗೆ ತರಾಕ ದಾರಿ ಮಾಡಕೊಂಡರಾ.
ನೋಡ್ರಿ ಜನಪ್ರತಿನಿಧಿಗಳೇ ಕೇಳ್ರಿ ಅತಿವೃಷ್ಟಿ ಸಂಕಷ್ಟದಾಗ ಸಿಕ್ಕಿರೋ ರೈತ ಕೈಗೆ ಬಂದಿರೋ ತುತ್ತು ಬೆಳೆ ಉಳಿಸಿಕೊಳ್ಳಾಕ ಈ ಮಾರ್ಗ ಕಂಡುಕೊಂಡಾಣ ಮುಂದಾದ್ರೂ ಈ ಬಗ್ಗೆ ಗಮನಹರಿಸಿ ಅನ್ನೋದ ರೈತಾಪಿ ಜನರ ಕಳಕಳಿ.
Kshetra Samachara
23/10/2020 10:20 pm