ಹುಬ್ಬಳ್ಳಿ- ಇಂದು ಕಿತ್ತೂರ ರಾಣಿ ಚನ್ನಮ್ಮ ದಿನಾಚರಣೆಯನ್ನು ಇಡೀ ರಾಜ್ಯಾದ್ಯಂತ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿಯೂ ಕೂಡ ಹುಬ್ಬಳ್ಳಿಯ ಚನ್ನಮ್ಮನ ಪುತ್ಥಳಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಲಕ್ಷಾಂತರ ರೂ. ಖರ್ಚು ಮಾಡಿ ಶೃಂಗಾರಗೋಳಿಸಿದ್ದಾರೆ. ಆದರೆ ನಾಡಧ್ವಜ ಬದಲಾಯಿಸುವುದನ್ನು ಮಾತ್ರ ಮರೆತಿದ್ದಾರೆ.
ಹೌದು , ಹೀಗೆ ಚನ್ನಮ್ಮನ ಮುಂದೆ ಹಾರಾಡುತ್ತಿರುವ ನಾಡಧ್ವಜ ಧೂಳಮಯವಾಗಿದೆ. ಆದ್ರೂ ಕೂಡ ಸಂಬಂಧಿಸಿದ ಅಧಿಕಾರಿಗಳಿಗೆ ಈ ನಾಡಧ್ವಜ ಕಾಣಲಿಲ್ಲವೇ, ನಾಡಿಗಾಗಿ ಹೋರಾಡಿದ ಈ ತಾಯಿಗೆ ಒಂದು ನಾಡಧ್ವಜ ಬದಲಾವಣೆ ಮಾಡದೇ ರಾಣಿ ಚನ್ನಮ್ಮನಿಗೆ ಅವಮಾನ ಮಾಡಿದಂತೆ. ಆದಷ್ಟು ಬೇಗ ಸಂಬಂಧಿಸಿದ ಅಧಿಕಾರಿಗಳು ಈ ಧೂಳು ಹೊಂದಿದ ನಾಡಧ್ವಜವನ್ನು ಬದಲಾಯಿಸಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
23/10/2020 11:24 am