ಧಾರವಾಡ: ಸಾಮಾನ್ಯವಾಗಿ ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಂಡರೆ ಹೊಸ ನೋಟುಗಳು ಬರುತ್ತವೆ. ಆದರೆ, ಧಾರವಾಡದ ಎಟಿಎಂ ಒಂದರಲ್ಲಿ ಗಲೀಜಾದ ನೋಟು ಬರುತ್ತಿವೆ. ಅದೂ 100 ಹಾಗೂ 500 ನೋಟಲ್ಲ. ಬದಲಾಗಿ ಎರಡು ಸಾವಿರದ ನೋಟುಗಳು.
ಹೌದು! ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿರುವ ಎಟಿಎಂನಲ್ಲಿ ಈ ರೀತಿ ಗಲೀಜಾದ ನೋಟುಗಳು ಬಂದಿದ್ದರಿಂದ, ಡ್ರಾ ಮಾಡಿದ ವ್ಯಕ್ತಿ ಹೌಹಾರಿದ್ದಾನೆ.
ಗೌಸ್ ನವಲೂರ ಎಂಬ ವ್ಯಕ್ತಿ ಎಟಿಎಂನಲ್ಲಿ 10 ಸಾವಿರ ರೂಪಾಯಿ ಡ್ರಾ ಮಾಡಿದ್ದಾರೆ.
ಆದರೆ, ಅವುಗಳು ಕಲರ್ ಕಲರ್ ಆಗಿದ್ದನ್ನು ನೋಡಿ, ಚೆಕ್ ಮಾಡಿದರೆ ತುಕ್ಕು ಹಿಡಿದ ಕಬ್ಬಿಣದಂತೆ ನೋಟಿನ ಮೇಲೆ ಬಣ್ಣ ಹತ್ತಿದೆ.
ಆಸ್ಪತ್ರೆಗೆ ಹಣ ಬೇಕು ಎಂದು ಡ್ರಾ ಮಾಡಿದ್ದ ಈ ವ್ಯಕ್ತಿಗೆ ಬೇರೆ ಕಡೆ ಹೋಗಿ ನೋಟು ಬದಲಾವಣೆ ಮಾಡಲು ಅವಕಾಶ ಇರಲಿಲ್ಲ.
ಹೀಗಾಗಿ ಇಂತಹ ನೋಟು ಬಂದಿದ್ದರಿಂದ ಈ ವ್ಯಕ್ತಿ ಪರದಾಟ ನಡೆಸಬೇಕಾಯಿತು.
Kshetra Samachara
18/10/2020 04:03 pm