ಕುಂದಗೋಳ : ಸ್ವಾಮಿ ಇಲ್ನೋಡಿ ಜನಾ ಕಾಲೀಡೋಕೆ ರಾಡಿ ಐತ್ರೀ ಯಪ್ಪಾ ಅನ್ನೋ ಈ ರಸ್ತೆದಾಗ ನಮ್ಮ ಹಳ್ಳಿ ಮಂದಿ ಎಷ್ಟು ಪದ್ದತ ಸೀರ್ ಕುಂತಾರ ಪಾಪಾ ಊರ ಬಿಟ್ಟ ಕುಂದಗೋಳಕ ಸಂತಿ, ಪ್ಯಾಟಿ, ಕಚೇರಿ, ನಿಬ್ಬಣಾ ಅಂತ ತಾಲೂಕಿಗೆ ಬರ್ತಾವು ಹೀಂಗ್ ಹಣಿಗೆ ಕೈ ಹಚಕ್ಕೊಂಡು ಬಸ್ ಬರೋ ತನಾ ಕಾಯ್ಕೊತ ರಸ್ತೆದಾಗ ಕುರತವ್.
ಈ ರಸ್ತೆಗೆ ಹೊಂದಿಕೊಂಡ ನಮಗ ಬಸ್ ಸ್ಟ್ಯಾಂಡ್ ಬೇಕ್ರಿ ಪಾ ಅಂದ್ರು ಇವ್ರು ಮಾತಿಗೆ ಯಾರು ಕಿಮ್ಮಿತ್ತ ಕೊಟ್ಟಿಲ್ಲ ನೋಡ್ರಿ, ಹಿಂಗ್ಯಾಗಿ ಈ ಮಂದಿ ಶಾಲಿ ಕಟ್ಟಿ, ರಸ್ತೇದಾಗ, ಅಲ್ಲೇ ನೋಡ್ರಿ ಮೆಟ್ಟಿಲ ಮ್ಯಾಲ ಕಾಲೇಜ್ ಮಕ್ಕಳ ಹೇಂಗ್ ಕುಂತಾವ್ ಮೇನ್ ಬಸ್ ಸ್ಟ್ಯಾಂಡ್ ಮಾರ್ಕೇಟ್ ಬಿಟ್ಟು ಬರೋಬ್ಬರಿ ಒಂದ್ ಕಿ.ಮೀ ದೂರೈತಿ ಇವ್ರು ಇಲ್ಲೇ ಮಾರ್ಕೇಟ್, ತಾಲೂಕು ಕಚೇರಿ ಕೆಲ್ಸಾ ಮುಗಿಸಿ ಅಲ್ಲಿ ಮಟಾ ನಡೆಯೋಕ ಆಗದ ಮುದುಕ್ರೂ ಮದುಕ್ಯಾರು ಎಲ್ಲಾರು ಇಲ್ಲೇ ಕುಂತಾರ.
ಅದ್ಹಂಗ ಈ ಮಾರ್ಕೇಟ್ ರಸ್ತೆದಾಗ ಮೊದ್ಲು ಅಂಬೇಡ್ಕರ್ ಸರ್ಕಲ್ ಕಡೆ ಬಸ್ ನಿಲ್ದಾಣ ಇತ್ತ ಅಂತ ಇವಾಗ ಅದನ್ನ ಕಿತ್ತ ಹಾಕ್ಯಾರ ಪಾಪಾ ಮುಂದ ಹೋಗೋ ಈ ಎಂಟು ಹಳ್ಳಿ ಜನಾ ಮಳಿ, ಬಿಸಿಲು ಮರೆತ ಈ ಸ್ಥಿತಿ ಒಳಗ ಕುಂತಾರ ಈ ಬಗ್ಗೆ ಸಂಬಂಧಪಟ್ಟರ ನೋಡ್ರಿ ಪಾ ಪಾಪಾ ಅವ್ರೀಗೆ ಒಂದ್ ಕೂರಾಗ ಬೆಚ್ಚಗ ಇರೋವಂತಾದ್ದ ಬಸ್ ನಿಲ್ದಾಣ ಮಾಡಿಸ್ರೀ ಕೊಟ್ಟ ಪುಣ್ಯ ಕಳ್ಕೋಳ್ರಿ.
Kshetra Samachara
16/10/2020 06:24 pm