ಹುಬ್ಬಳ್ಳಿ: ಲಾಕ್ ಡೌನ್ ಸಂದರ್ಭದಲ್ಲಿ ಹಾಗೂ ಅನ್ ಲಾಕ್ ಬಳಿಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಈಗ ಕೊಂಚ ಚೇತರಿಸಿಕೊಳ್ಳುತ್ತಿದೆ.ಜನರ ಅನುಕೂಲಕ್ಕೆ ತಕ್ಕಂತೆ ಕಾರ್ಯಾಚರಣೆಗೆ ಮುಂದಾಗಿರುವ ಸಂಸ್ಥೆ ಆರ್ಥಿಕ ಸಮಸ್ಯೆಗಳನ್ನು ಹಿಂದಿಕ್ಕಿ ಹೊಸ ರೀತಿಯ ಕಾರ್ಯಚಟುವಟಿಕೆಗಳ ಮೂಲಕ ಜಯ ಸಾಧಿಸುತ್ತಿದೆ.
ಹೌದು...ಸಂಪೂರ್ಣ ಲಾಕ್ ಡೌನ್ ತೆರವುಗೊಳಿಸಿದ ಬಳಿಕ ಅವಳಿ ನಗರ ಮತ್ತು ಸಿಟಿ ಮಧ್ಯೆ ಬಸ್ ಗಳಲ್ಲಿ ಸಂಚರಿಸುವವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ನಗರ ಸಾರಿಗೆಯಲ್ಲಿ ಆಶಾವಾದ ಹುಟ್ಟಿಸಿದೆ.ಅಲ್ಲದೇ ಸಂಸ್ಥೆಗೂ ಕೂಡ ನಿರೀಕ್ಷಿತ ಮಟ್ಟದಲ್ಲಿ ಅಲ್ಲದಿದ್ದರೂ ಆರ್ಥಿಕ ಸಮಸ್ಯೆ ಸರಿದೂರಿಸಲು ಒಂದು ಒಳ್ಳೆಯ ಆದಾಯವಂತೂ ಬರತೊಡಗಿದೆ.
ಹುಬ್ಬಳ್ಳಿ ಮಹಾನಗರದಲ್ಲಿ ನಿತ್ಯ ಸರಾಸರಿ 65-70 ಸಾವಿರ ಜನರು ಹಾಗೂ ಹು-ಧಾ ಸಾರಿಗೆ ಜೀವನಾಡಿ ಬಿಆರ್ ಟಿಎಸ್ ಚಿಗರಿ ಬಸ್ ಗಳಲ್ಲಿ 25 ಸಾವಿರ ಜನರು ಸಂಚರಿಸುತ್ತಿದ್ದಾರೆ. ಕೊರೊನಾ ಮುನ್ನ ಮತ್ತು ನಂತರದ ತಿಂಗಳಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂದರೂ ಲಾಕ್ ಡೌನ್ ತೆರವು ಬಳಿಕ ಸಮೂಹ ಸಾರಿಗೆ ವ್ಯವಸ್ಥೆ ಸುಧಾರಣೆ ಹಾದಿಯಲ್ಲಿರುವುದು ಕಂಡು ಬರುತ್ತದೆ.
ಕೊರೊನಾ ಮುನ್ನ ಹುಬ್ಬಳ್ಳಿ ಮಹಾನಗರ, ಉಪನಗರಗಲ್ಲಿ ನಿತ್ಯ ಸರಾಸರಿ 1.25 ಲಕ್ಷ ಜನರು ಮತ್ತು ಬಿಆರ್ ಟಿಎಸ್ ಬಸ್ ಗಳಲ್ಲಿ 98 ಸಾವಿರ ಜನರು ಪ್ರಯಾಣಿಸುತ್ತಿದ್ದರು. ಕೊರೊನಾ ನಂತರದಲ್ಲಿ ಲಾಕ್ ಡೌನ್, ಮಾರ್ಗಸೂಚಿ ನಿರ್ಬಂಧ ಪರಿಣಾಮ ಸ್ಥಗಿತಗೊಂಡಿದ್ದ ಸಮೂಹ ಸಾರಿಗೆ ವ್ಯವಸ್ಥೆಯು ಮಾರ್ಗಸೂಚಿ ಹಾಗೂ ಲಾಕ್ ಡೌನ್ ಸಂಪೂರ್ಣ ತೆರವು ಬಳಿಕ ದಿನದಿಂದ ದಿನಕ್ಕೆ, ತಿಂಗಳಿಂದ ತಿಂಗಳಿಗೆ ಹಳಿಗೆ ಬರುತ್ತಿದ್ದು,ನಗರ ಸಾರಿಗೆಯಿಂದ ದಿನಕ್ಕೆ 15 ಲಕ್ಷ ಆದಾಯ ಬರುತ್ತಿದೆ.
ಈಗಾಗಲೇ ನಗರದ ಭಾಗದಲ್ಲಿ ಬಿ.ಆರ್.ಟಿ.ಎಸ್ ಹಾಗೂ ನಗರ,ಉಪನಗರ ಬಸ್ ಸೇರಿದಂತೆ ಒಟ್ಟು 70% ಅಂದರೇ 250 ಬಸ್ ಕಾರ್ಯಾಚರಣೆ ನಡೆಸುತ್ತಿದ್ದು,ಮುಂಬರುವ ದಿನಗಳಲ್ಲಿ ಸೂಕ್ತ ಜಾಗರೂಕತೆಯಿಂದ ಕಾರ್ಯಾಚರಣೆಗೆ ಸಾರಿಗೆ ಸಂಸ್ಥೆ ಚಿಂತನೆ ನಡೆಸಿದೆ.
Kshetra Samachara
16/10/2020 03:23 pm