ಕುಂದಗೋಳ : ತಾಲೂಕಿನ ಕಡಪಟ್ಟಿ ಗ್ರಾಮದ ದೇಸಾಯಿ ಹೊಲದ ರಸ್ತೆಗೆ ರೇಲ್ವೇ ಹಳಿ ಡಬಲ್ ಕಾಮಗಾರಿಗಾಗಿ ನಿರ್ಮಿಸಿದ ಬ್ರೀಡ್ಜ್ ನಲ್ಲಿ ಕಲುಷಿತ ನೀರು ಹಾಗೂ ಹಾವು ವಾಸವಾಗಿದ್ದು ರೈತಾಪಿ ಚಟುವಟಿಕೆ ಕೈಗೊಳ್ಳಲು ಟ್ರ್ಯಾಕ್ಟರ್, ಎತ್ತು, ಚಕ್ಕಡಿ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ರೈತರು ಬ್ರೀಡ್ಜ್ ನಲ್ಲಿ ಸಂಗ್ರಹವಾಗಿರುವ ನೀರನ್ನು ಹೊರಹಾಕಲು ಪ್ರಯತ್ನಿಸಿದರೂ ರೇಲ್ವೇ ಗುತ್ತಿಗೆದಾರರು ಸಂಪರ್ಕಕ್ಕೆ ಸಿಗುತ್ತಿಲ್ಲ ದಯವಿಟ್ಟು ಈ ಬಗ್ಗೆ ಸಂಬಂಧಪಟ್ಟವರು ಸ್ಪಂದಿಸುವಂತೆ ಕಡಪಟ್ಟಿ, ಅಲ್ಲಾಪುರ, ಹಳ್ಯಾಳ, ನೂಲ್ವಿ, ಅದರಗುಂಚಿಯ 3 ಸಾವಿರ ಹೆಕ್ಟೇರ್ ಹೊಲಗಳ ರೈತರು ಆಗ್ರಹಿಸಿದ್ದಾರೆ.
Kshetra Samachara
15/10/2020 01:48 pm