ಧಾರವಾಡ: ಹೆಂಗ ಅದೀರಿಪಾ ಧಾರವಾಡ ಮಂದಿ? ನಿಮಗೇನ ಬಿಡ್ರಿ ಚೆಂದಗೇನ ಇರ್ತೀರಿ.. ರಸ್ತೆ ಹಾಳಾದ್ರೂ ಅಷ್ಟ.. ಸರಿ ಇದ್ರೂ ಅಷ್ಟ. ಯಾವುದನ್ನೂ ನೀವು ಪ್ರಶ್ನೆ ಮಾಡಾಕ ಹೋಗುದಿಲ್ಲ. ಅಂದಂಗ ಧಾರವಾಡದಾಗ ಹಾಸ್ಮಿನಗರ ಅಂತಾ ಒಂದು ಏರಿಯಾ ಐತಿ. ಈಗ ನೀವೇನ ನೋಡಾಕತ್ತೀರಲ್ಲಾ ಇದ ನೋಡ್ರಿ ಹಾಸ್ಮಿನಗರ ರಸ್ತೆ. ಇದೇನ್ರಿ ಕಂಬಳಾ ಓಡಿಸೋ ಗದ್ದೆ ಏನ್ರಿ ಅಂತ ಕೇಳಬ್ಯಾಡ್ರ್ಯಾ ಮತ್ತ..
ಇದು ಧಾರವಾಡದ ಹಾಸ್ಮಿನಗರ ಅನ್ನೋ ಏರಿಯಾದ ರಸ್ತೆ. ಇದಕ್ಕ ಮೊದಲ ಕೆಂಪು ಮಣ್ಣಿನ ರಸ್ತೆ ಮಾಡಿದ್ರು. ಆದ್ರ ಮಳಿ ಆದ್ರ ಸಾಕು ಈ ರಸ್ತೆ ಕೆಸರಿನ ಗದ್ದೆಗಿಂತ ಬಲಾ ಅಕ್ಕೈತಿ ನೋಡ್ರಿ. ಈ ಭಾಗದ ಶಾಸಕ ಅಮೃತ ದೇಸಾಯಾರು ಈ ರಸ್ತೆ ಮಾಡಿಕೊಡಬೇಕು ಅಂತಾ ಅಲ್ಲಿನ ಜನ ಒತ್ತಾಯ ಮಾಡಾಕತ್ತಾರ. ಕೂಡ್ಲೆ ಈ ಜನರಿಗೆ ಅನುಕೂಲ ಆಗುವಂಗ ನಮ್ಮ ಶಾಸಕರು ರಸ್ತೆ ಮಾಡಿಸಬೇಕಾಗೇತಿ ನೋಡ್ರಿ ಪಾ.
Kshetra Samachara
13/10/2020 10:22 am