ಹುಬ್ಬಳ್ಳಿ : ಭಾರತೀಯ ಮೂಲದ ದಂಪತಿಯ 7 ತಿಂಗಳ ಮಗುವನ್ನು ಜರ್ಮನಿಯ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಈ ಮೂಲಕ ಅರಿಹಾ ಎಂಬ ಬಾಲಕಿಯನ್ನು ವಾಪಾಸ್ ಅವರ ಭಾರತೀಯ ಕುಟುಂಬಕ್ಕೆ ಒಪ್ಪಿಸಬೇಕೆಂದು ಒತ್ತಾಯಿಸಿ, ಜೈನ್ ಸಮೂದಾಯದ ವಿವಿಧ ಸಂಘಟನೆಗಳು ನಗರದಲ್ಲಿ ಬೃಹತ್ ರ್‍ಯಾಲಿ ಪ್ರತಿಭಟನೆ ನಡೆಸಿದರು.
ನಗರದ ಕಂಚಿಗಾರ ಗಲ್ಲಿಯಿಂದ ತಹಶೀಲ್ದಾರ ಕಚೇರಿವರೆಗೆ ರ್‍ಯಾಲಿಯಲ್ಲಿ ನೂರಾರು ಜೈನ ಸಮೂದಾಯದ ಜನರು ಭಾಗವಹಿಸಿ ಜರ್ಮನ್ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು. ಈ ವೇಳೆ ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅರಿಹಾ ಮಗುವನ್ನು ವಾಪಾಸ್ ಭಾರತಕ್ಕೆ ಕರೆತರುವ ಕ್ರಮ ವಹಿಸಬೇಕೆಂದು ಒತ್ತಾಯಿಸಿ ತಹಶೀಲ್ದಾರರ ಮೂಲಕ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
Kshetra Samachara
30/09/2022 03:34 pm