ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 6 ತಿಂಗಳ ಭಾರತೀಯ ಹಸುಳೆ ಜರ್ಮನ್ ಅಧಿಕಾರಿಗಳ ವಶದಲ್ಲಿ; ಬಿಡುಗಡೆಗೆ ದಂಪತಿ ಕಣ್ಣೀರು

ಹುಬ್ಬಳ್ಳಿ: ಜರ್ಮನಿಯಲ್ಲಿ 6 ತಿಂಗಳ ಭಾರತೀಯ ಹಸುಳೆಯನ್ನು ವಶಕ್ಕೆ ಪಡೆಯಲಾಗಿದೆ. ಅಷ್ಟಕ್ಕೂ ಆ ಪುಟ್ಟ ಮಗುವನ್ನು ಯಾಕೆ ಜರ್ಮನ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂಬುದರ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ...

ಹೌದು... ಈ ಪೋಟೋದಲ್ಲಿ ಕಾಣುತ್ತಿರುವ ಈ ಹಸುಳೆ ಹೆಸರು ಅರಿಹಾ. ಕೇವಲ ಆರು ತಿಂಗಳಿನ ಅರಿಹಾಳನ್ನು ಜರ್ಮನ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಎಸ್... ಭಾರತದ ಮುಂಬೈ ಮೂಲದ ಭವೇಶ್ ಷಾ ಮತ್ತು ಧಾರ ದಂಪತಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರಿಂದ 2018 ರಲ್ಲಿ ಜರ್ಮನಿನ ಬರ್ಲಿನ್ ನಗರದ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಫೆಬ್ರವರಿ 2021ರಲ್ಲಿ ಅರಿಹಾಗೆ ಜನ್ಮ ನೀಡುತ್ತಾರೆ. ಆರು ತಿಂಗಳಿದ್ದಾಗ ಅರಿಹಾಗೆ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ದಂಪತಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ವೈದ್ಯರು ಮಗುವನ್ನು ಪರೀಕ್ಷಿಸಿದಾಗ ಏನು ತೊಂದರೆ ಇಲ್ಲವೆಂದು ತಿಳಿಸಿದ್ದಾರೆ.

ಒಂದು ವಾರದ ನಂತರ ಅರಿಹಾಗೆ ಮತ್ತೆ ಅದೇ ತೊಂದರೆಯಾಗಿದೆ. ಕೂಡಲೇ ಭವೇಶ್ ದಂಪತಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಅಧಿಕಾರಿಗಳನ್ನು ಕರೆಯಿಸಿ, ಈ ದಂಪತಿಯು ಮಗುವನ್ನು ಸರಿಯಾಗಿ ಪಾಲನೆ ಪೋಷಣೆ ಮಾಡುತ್ತಿಲ್ಲವೆಂದು ತಿಳಿಸಿದಾಗ ಜರ್ಮನ್ ಅಧಿಕಾರಿಗಳು ಅರಿಹಾಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

ಅರಿಹಾಳನ್ನು ವಶಕ್ಕೆ ಪಡೆದು ಒಂದು ವರ್ಷ ಕಳೆದರೂ ಮಗುವನ್ನು ಮರಳಿಸುತ್ತಿಲ್ಲವೆಂದು ಈ ಜೈನ ದಂಪತಿ ಕಣ್ಣೀರು ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹಮಂತ್ರಿ ಅಮಿತ್ ಷಾ, ಜರ್ಮನ್ ಸರ್ಕಾರದ ಜೊತೆ ಮಾತನಾಡಿ ಮುದ್ದುಕಂದ ಅರಿಹಾಳನ್ನು ಮರಳಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.‌

- ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Somashekar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

29/09/2022 03:55 pm

Cinque Terre

59.06 K

Cinque Terre

1

ಸಂಬಂಧಿತ ಸುದ್ದಿ