ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಾವಿನಲ್ಲೂ ಸಾರ್ಥಕತೆ ಮೆರೆದ ಈರಪ್ಪ: ಇಬ್ಬರ ಬಾಳಿಗೆ ಬೆಳಕಾದ ಕಳಸಣ್ಣವರ

ಧಾರವಾಡ: ಎರಡು ದಿನಗಳ ಹಿಂದೆಯಷ್ಟೇ ನಡೆದ ಅಪಘಾತದಲ್ಲಿ ಗಾಯಗೊಂಡು ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಈರಪ್ಪ ದುಂಡಪ್ಪ ಕಳಸಣ್ಣವರ (46) ಬುಧವಾರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಸೆ.25 ರಂದು ಮುಮ್ಮಿಗಟ್ಟಿ ಬಳಿ ನರೇಗಾ ಯೋಜನೆಯಡಿ ಕೆಲಸ ಮುಗಿಸಿಕೊಂಡು ಟಿವಿಎಸ್ ಎಕ್ಸಲ್ ವಾಹನದಲ್ಲಿ ಅಣ್ಣ-ತಮ್ಮ ಮನೆಗೆ ಹೊರಟಿದ್ದರು, ಈ ವೇಳೆ ಜವರಾಯನಂತೆ ಮಾರುತಿ ಇಕೋ ವಾಹನ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ತೀವ್ರಗಾಗಿ ಗಾಯಗೊಂಡಿದ್ದ ಇಬ್ಬರನ್ನು ಕಿಮ್ಸಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಈರಪ್ಪ ಮೃತಪಟ್ಟಿದ್ದರೆ ಈತನ ಸಹೋದರ ಬಸಪ್ಪ ಕಳಸಣ್ಣವರ ಇನ್ನೂ ಕಿಮ್ಸ್‌ನಲ್ಲಿ ಚಿಕಿತ್ಸೆಯಲ್ಲಿದ್ದಾರೆ.

ಈ ಘಟನೆಯಲ್ಲಿ ಮುಮ್ಮಿಗಟ್ಟಿಯ ಗ್ರಾಮದ ಮಾರುತಿ ಇಕೋ ವಾಹನದ ಚಾಲಕ ಅಜಿತ ಬಸಪ್ಪ ಸಾಕಣ್ಣವರ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಈರಪ್ಪ ಅವರ ಸಾವಿನ ಶೋಕದಲ್ಲೂ ಅವರ ನೇತ್ರಗಳನ್ನು ಕುಟುಂಬಸ್ಥರು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದು, ಈ ನೇತ್ರಗಳ ಮೂಲಕ ಇಬ್ಬರ ಬಾಳಿನಲ್ಲಿ ಬೆಳಕು ನೀಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

28/09/2022 10:25 pm

Cinque Terre

65.4 K

Cinque Terre

0

ಸಂಬಂಧಿತ ಸುದ್ದಿ