ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಾಣೆ ಹಿಡಿದು ಜೀವನ ಚಕ್ರ ಕಟ್ಟಿಕೊಂಡ ಹುಬ್ಬಳ್ಳಿಯ ವೃದ್ಧ

ಪಬ್ಲಿಕ್ ನೆಕ್ಸ್ಟ್ ವಿಶೇಷ- ಈರಣ್ಣ ವಾಲಿಕಾರ

ಹುಬ್ಬಳ್ಳಿ: ಸೈಕಲ್ ಚಕ್ರ ತಿರುಗಿಸಿ, ಮನೆ ಬಳಕೆಯ ಈಳಿಗೆ, ಕುಡಗೋಲು, ಕತ್ತರಿ, ಚಾಕು ಇತ್ಯಾದಿ ವಸ್ತುಗಳನ್ನು ಸಾಣೆ ಹಿಡಿದು ಮೊನಚುಗೊಳಿಸಿ ಆದಾಯ ಗಿಟ್ಟಿಸುವವರ ಬದುಕು ಸಾಣೆ ಕಲ್ಲಿನಂತೆ ಸವೆಯುತ್ತದೆ. ಅವರ ಬದುಕಿನ ಚಿತ್ರಣ ಹೇಗಿದೆ ಎಂಬುದನ್ನು ತೋರಿಸ್ತೀವಿ ನೋಡಿ.

ಹೀಗೆ ಮೊಂಡಾದ ಕತ್ತರಿ, ಚಾಕು ಸಾಣಿ ಹಿಡಿಯುತ್ತಿರುವ ಈತನ ಹೆಸರು ಬಾನು. ಮೂಲತಃ ಹುಬ್ಬಳ್ಳಿ ವಿರಾಪೂರ ನಿವಾಸಿ. ಕಳೆದ 30 ವರ್ಷಗಳಿಂದ ಸಾಣೆ ಹಿಡಿಯವ ಕಾಯಕದಲ್ಲಿ ನಿರತರಾಗಿದ್ದಾರೆ. ಮೊದಲು ಹೆಗಲ ಮೇಲೆ ಹೊತ್ತೊಯ್ದು ಸಾಣೆ ಹಿಡಿಯುತ್ತಿದ್ದವರು. ಇದೀಗ ಕ್ರಮೇಣವಾಗಿ ಸೈಕಲ್ ಮೂಲಕ ಸಾಣೆಗಾರಿಕೆಯನ್ನು ನಿರ್ವಹಿಸುತ್ತ ಬದುಕು ಕಟ್ಟಿಕೊಂಡಿದ್ದಾರೆ . ನಿತ್ಯ ಸೈಕಲ್ ಮೂಲಕ ಸಾಣೆ ಚಕ್ರ ಹೊತೊಯ್ದು ತಮ್ಮ ಕೆಲಸ ಮಾಡುತ್ತಿದ್ದಾರೆ. ಇನ್ನು ದಿನಪೂರ್ತಿ ಕೆಲಸ‌ ಮಾಡಿದ್ರೇ ದಿನಕ್ಕೆ 400-500ರೂ. ಆದಾಯ ಗಳಿಸುತ್ತಿದ್ದಾರೆ. ಬಾನು ಅವರು ಅವರ ಅಜ್ಜನಿಂದ ಬಳುವಳಿಯಾಗಿ ಬಂದ ಈ ಉದ್ಯೋಗ, ಇದೀಗ ತಾವೇ ನಿರ್ವಹಿಸಿಕೊಂಡು ಧಾರವಾಡ ಜಿಲ್ಲೆ ಅಷ್ಟೇ ಅಲ್ಲದೇ ಹೊರಜಿಲ್ಲೆಗೂ ಹೋಗಿ ತಮ್ಮ ಕಾಯಕ ಮಾಡುತ್ತಾರೆ.

ಇನ್ನು ಇವರ ಕಸುಬುಗಾರಿಕೆಯಿಂದ ಜನರು ನೀಡುವ ಹಣವೇ ಇವರಿಗೆ ಜೀವನಾಧಾರವಾಗಿದೆ. ಒಂದು ಚಾಕು ಅಥವಾ ಕುಡಗೋಲು ಸಾಣೆ ಹಿಡಿಯಲು 20 ರೂ ಪಡೆಯುತ್ತಾರೆ. ಒಮ್ಮೊಮ್ಮೆ ಯಾವುದೇ ಗ್ರಾಹಕರು ಸಿಗದೆ ದಿನವಿಡೀ ಕೆಲಸ ಇಲ್ಲದೇ ಮನೆಗೆ ಹೋಗಿರುವುದು ಉಂಟು. ಬಾನು ಅವರು ದೈನಂದಿನ ಜೀವನದಲ್ಲಿ ಬದುಕು ಇಷ್ಟೇ ಎಂದು ಸುಮ್ಮನೇ ಕುಳಿತಿಲ್ಲ. ನಿತ್ಯ ಬದುಕಿನ ಚಕ್ರ ಉರುಳಲು, ಸಾಣೆ ಕಲ್ಲು ಜೀವ ಸವೆದಂತೆ ತಮ್ಮ ಜೀವನ ಸವೆಸಬೇಕಾದ ಪ್ರಸಂಗ ಬಂದೊದಗಿದೆ.

ಒಟ್ನಲ್ಲಿ ಜೀವನ ಎಂಬ ಚಕ್ರದಲ್ಲಿ, ತಾವು ಬದಕುಬೇಕು ನಮ್ಮವರು ಬದುಕಬೇಕು ಎಂದು ಸಾಣೆಗೆ ಹಿಡಿದು ಜೀವನ ಸಾಗಿಸುತ್ತಿರುವ ಇವರ ಕಾರ್ಯ ಇನ್ನೂ ಚನ್ನಾಗಿ ಸಾಗಲಿ ಎಂಬುದು ರಲ್ಲಿ ನಮ್ಮ ಅಭಿಲಾಷೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

24/08/2022 12:54 pm

Cinque Terre

55.82 K

Cinque Terre

1

ಸಂಬಂಧಿತ ಸುದ್ದಿ