ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಜಾನಪದಕ್ಕೆ ಶ್ರೀಮಂತಿಕೆ ತಂದ ಸಾಂಬಯ್ಯರಿಗೆ ಅಕಾಡೆಮಿ ಪ್ರಶಸ್ತಿ

ಕುಂದಗೋಳ: ಜಾನಪದ ಕಲೆ ಆ ಕಲೆಯ ಜೀವಂತಿಕೆ ಇನ್ನೂ ಬಾಯಿಂದ ಬಾಯಿಗೆ ತಲುಪಿ ಕೇಳುಗರ ಕರ್ಣ ಪಟಲಕ್ಕೆ ಅರ್ಥಗರ್ಭಿತ ಹಾಡೊಂದು ಕೇಳುತ್ತಿದೆ ಎಂದ್ರೇ, ಅದು ಜಾನಪದ ಕಲಾವಿದ ಸಾಂಬಯ್ಯ ಹಿರೇಮಠರಂತಹ ದೈತ್ಯ ಪ್ರತಿಭೆ ಇಂದಲೇ ಎಂದ್ರೇ ತಪ್ಪಿಲ್ಲ ಬಿಡಿ.

ಹಾಗಾದ್ರೇ ಈ ಸಾಂಬಯ್ಯ ಹಿರೇಮಠ ಯಾರು ಎಂದ್ರಾ? ಇವರೇ ಪ್ರಸಕ್ತ ವರ್ಷದ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ರಾಜ್ಯದ 30 ಜನರಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹರ್ಲಾಪೂರ ಗ್ರಾಮದಿಂದ ಆಯ್ಕೆಯಾದವರು.

ಮೂಲತಃ ರೈತಾಪಿ ಕುಟುಂಬದ ಮಗನಾದ ಸಾಂಬಯ್ಯ ಸರಳ ಜೀವಿ, ಕೃಷಿ ಅವರ ಮನೆ ಆರ್ಥಿಕತೆಗೆ ಆಧಾರ ಇನ್ನೂ ಜಾನಪದ ಶ್ರೀಮಂತಿಕೆ ಇವರ ಬದುಕಿಗೆ ಗೌರವವಾಗಿ ಕಳೆದ ಇಪ್ಪತ್ತು ವರ್ಷಗಳಿಂದ 'ಯುವ ಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ' ಎಂಬ ಹತ್ತು ಜನ ಜಾನಪದ ಹುರಿಯಾಳುಗಳ ಸಂಘ ಕಟ್ಟಿ ರಾಜ್ಯಾದ್ಯಂತ ಸುತ್ತಿ ಜಾನಪದ ಕಲೆಯನ್ನು ತಮ್ಮ ಹಾಡುಗಾರಿಕೆಯಿಂದ ಎಲ್ಲೆಡೆ ಬಿತ್ತಿದವರು.

ಸದ್ಯ 55 ವರ್ಷದ ಸಾಂಬಯ್ಯ ಹಿರೇಮಠ ಎಂ.ಎ ಕನ್ನಡ ಹಾಗೂ ಪತ್ರಿಕೋದ್ಯಮ ಶಿಕ್ಷಣ ಪಡೆದು ಬಾಲ್ಯದಿಂದಲೇ ಜಾನಪದ ಸೊಗಡನ್ನು ಕಲಿತು 1993 ರಲ್ಲಿ ಮಲ್ಲಕಂಬದಲ್ಲಿ ಯುನಿವರ್ಸಿಟಿ ಬ್ಲೂ ಆಗಿ ಹೊರಹೊಮ್ಮಿ ಯೋಗದ ಮಜಲನ್ನು ಸಹ ಅರಿತವರು.

ಸದ್ಯ ಪ್ರಶಸ್ತಿ ಬಂದಿತೆಂದು ಹಿಗ್ಗದೆ ವಯಸ್ಸಾಯ್ತು ಎಂದು ಕುಗ್ಗದೆ ತಮ್ಮ ಮನೆಯಲ್ಲೇ ಜಾನಪದ ಕ್ರೀಡಾರಂಗ ಕುಟೀರ ತರಬೇತಿ ಕೇಂದ್ರ ತೆರೆದು ಆಸಕ್ತರಿಗೆ ಜಾನಪದ ಕಲೆ ಧಾರೆ ಎರೆಯುತ್ತಾ, ತಾವೂ ಸಹ ಕಲೆಯ ಮೂಲಕ ಜಗತ್ತು ಸುತ್ತುತ್ತಾ ಜಾನಪದ ದೇವಿಯ ಆರಾಧನೆಯಲ್ಲೇ ಖುಷಿ ಕಂಡವರು.

ಒಟ್ಟಾರೆ ಅಹಂ ಎಂಬ ಎರಡಕ್ಷರ ಬದಿಗಿಟ್ಟು ವೇದಿಕೆ ಸಣ್ಣದೆ ಇರಲಿ, ದೊಡ್ಡದೆ ಇರಲಿ, ರಸ್ತೆ ಮೇಲೆ ಇರಲಿ ಹಾಡುತ್ತಾ ರಂಜಿಸುತ್ತಾ ಜಾನಪದ ಕಲೆ ಉಳಿಸುತ್ತಾ ಜನಮನ್ನಣೆ ಜೊತೆ ಅದೆಷ್ಟೋ ಪ್ರಶಸ್ತಿ, ಪ್ರಮಾಣಪತ್ರ, ಸನ್ಮಾನಕ್ಕೆ ಸಾಂಬಯ್ಯ ಭಾಜನರಾಗಿದ್ದಾರೆ.

ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

21/08/2022 05:09 pm

Cinque Terre

48.16 K

Cinque Terre

2

ಸಂಬಂಧಿತ ಸುದ್ದಿ