ಹುಬ್ಬಳ್ಳಿ: ಬೇಕರಿಗೆ ಹೋದ್ರೆ ಸ್ವೀಟ್- ಖಾರ ಹಾಗೂ ಇನ್ನಿತರ ತಿಂಡಿ ತಿನಿಸು ಸಿಗುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಯುವಕ ಸ್ವೀಟ್- ಖಾರ ಜೊತೆಗೆ ಸಾಮಾನ್ಯ ಜ್ಞಾನ ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಅಭಿಷೇಕ ಬಿ. ತಿಪ್ಪಶೆಟ್ಟಿ ಎಂಬವರು ಹುಬ್ಬಳ್ಳಿಯ ಗದಗ ರಸ್ತೆಯಲ್ಲಿ ಎಸ್ ಎಲ್‌ವಿ ಅಯ್ಯಂಗಾರ್ ಬೇಕರಿ ಇಟ್ಟುಕೊಂಡು ಜೀವನ ಸಾಗಿಸುವುದರ ಜೊತೆಗೆ, ಈಗಿನ ಕಾಲದ ಯುವಕರಿಗೆ ದೇಶಭಕ್ತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನು ತಮ್ಮ ಅಂಗಡಿಯಲ್ಲಿ ಹಾಕಿ ಜಾಗೃತಿ ಜೊತೆಗೆ ಜ್ಞಾನವನ್ನು ನೀಡುತ್ತಿದ್ದಾರೆ.
ಮಾಜಿ ಪ್ರಧಾನಿ ದಿ. ಲಾಲ್ ಬಹಾದ್ದೂರ್ ಶಾಸ್ತ್ರಿ, ವೀರ ಸಾವರ್ಕರ್, ಅಬ್ದುಲ್ ಕಲಾಂ, ಬಾಲ ಗಂಗಾಧರನಾಥ್ ತಿಲಕ್, ಮಹಾತ್ಮ ಗಾಂಧಿ, ಸಂಗೊಳ್ಳಿ ರಾಯಣ್ಣ, ಬಸವಣ್ಣ, ಸಂದೀಪ್ ಉನ್ನಿಕೃಷ್ಣನ್, ಸಾಲು ಮರದ ತಿಮ್ಮಕ್ಕ, ವೆಂಕಟೇಶ ಮೂರ್ತಿ, ಸಿಂಗರ್ ವಿಜಯ್ ಪ್ರಕಾಶ್, ಪಿ.ಟಿ. ಉಷಾ, ಪುನೀತ್ ರಾಜಕುಮಾರ್ ಸೇರಿದಂತೆ ಇನ್ನೂ ಅನೇಕ ಮಹನೀಯರ ಭಾವಚಿತ್ರಗಳನ್ನು ತಮ್ಮ ಅಂಗಡಿಯಲ್ಲಿ ಹಾಕಿ ಯುವಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
- ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
12/08/2022 03:30 pm