ಕುಂದಗೋಳ: ನಾಯಿ ಬೆಕ್ಕು ಬದ್ಧ ವೈರಿ ಒಂದನ್ನೊಂದು ಕಂಡ್ರೆ ಕಡು ಕೋಪ ಎನ್ನುವುದು ಲೋಕನುಡಿ.
ಆದ್ರೇ ಈ ಹಳ್ಳಿಯ ನಾಯಿ ಮತ್ತು ಬೆಕ್ಕು ಮಾತ್ರ ಕುಚಿಕು ಸ್ನೇಹಿತರು.ಒಂದಕ್ಕೊಂದು ಪ್ರೀತಿಯಿಂದ ಕಚ್ಚಾಡಿ, ಪ್ರೀತಿಯಿಂದ ಒಂದಾಗುತ್ತವೆ.
ಅಂದ್ಹಾಗೆ ಈ ನಾಯಿ ಹಾಗೂ ಬೆಕ್ಕು ಕುಂದಗೋಳ ಪಟ್ಟಣದ ನಾಗು ಮುದೆನ್ನವರ ಎಂಬುವವರದ್ದಾಗಿವೆ. ಇವರ ಈ ಹೆಣ್ಣು ನಾಯಿಯು ಹಾಕಿದ ಮರಿಗಳು ಇತ್ತಿಚೆಗೆ ಮೃತಪಟ್ಟಿದ್ದು, ಬಳಿಕ ಈ ನಾಯಿ ಬೆಕ್ಕಿನ ಜೊತೆ ಇಷ್ಟೊಂದು ಅನ್ಯೋನ್ಯತೆಯಿಂದ ಬೆರೆತಿದೆ.
ಒಟ್ಟಾರೆ ನಾಯಿ ಮತ್ತು ಬೆಕ್ಕು ಕಡು ವೈರಿ ಎನ್ನುವ ಮಾತಿನ ನಡುವೆ ಈ ನಾಯಿ, ಬೆಕ್ಕಿನ ಸಲುಗೆ ಅದನ್ನು ಅಳಿಸಿ ಹಾಕಿದೆ.
Kshetra Samachara
13/07/2022 05:39 pm