ಹುಬ್ಬಳ್ಳಿ: ಅವರೆಲ್ಲರೂ ಬಿಸಿಲು, ಮಳೆ, ಗಾಳಿ ಲೆಕ್ಕಿಸದೆ ಸೇವೆ ಸಲ್ಲಿಸುತ್ತಿರುವ ಸೇವಕರು. ಇವರ ಸೇವೆಗೆ ಹುಬ್ಬಳ್ಳಿಯ ಖ್ಯಾತ ಉದ್ಯಮಿ ಹಾಗೂ ಸ್ವರ್ಣ ಗ್ರೂಪ್ ಆಫ್ ಕಂಪನಿಯ ಮಾಲೀಕ ವಿ.ಎಸ್.ವಿ ಪ್ರಸಾದ ಅವರ ನೇತೃತ್ವದಲ್ಲಿ RED FM ವಿನೂತನ ಕಾರ್ಯಕ್ಕೆ ಮುಂದಾಗಿದೆ.
ಹುಬ್ಬಳ್ಳಿಯ RED FM ಸಮ್ಮರ್ ಸ್ಮೈಲ್ ಅಭಿಯಾನ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕರ್ತವ್ಯಕ್ಕೆ ಅನುಕೂಲವಾಗುವ ಸಮ್ಮರ್ ಸ್ಮೈಲ್ ಕಿಟ್ ವಿತರಣೆ ಮಾಡುವ ಕಾರ್ಯಕ್ಕೆ ಮಾಡುತ್ತಿದೆ.
ಸದ್ಯ RED FM 93.5 ನ ಸಮ್ಮರ್ ಸ್ಮೈಲ್ ಕಾರ್ಯಕ್ರಮಕ್ಕೆ ಉದ್ಯಮಿ ಹಾಗೂ ಸಮಾಜ ಸೇವಕರಾದ ಡಾ.ವಿ.ಎಸ್.ವಿ ಪ್ರಸಾದ ಅವರು ಚಾಲನೆ ನೀಡಿದರು. ಅಲ್ಲದೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೂ ಕೂಡ ಐದು ದಿನಗಳ ಅಭಿಯಾನದ ಮೂಲಕ ಕಿಟ್ ವಿತರಣೆಗೆ ಇಂದು ವಿದ್ಯುಕ್ತವಾಗಿ ಚಾಲನೆ ನೀಡಿದರು.ಎಂತಹದ್ದೇ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ದೃತಿಗೆಡದೆ ಕರ್ತವ್ಯ ನಿರ್ವಹಿಸುವ ಸೇವೆಕರ ಸೇವೆಗೆ ಒಂದು ಕೃತಜ್ಞತೆ ಸಲ್ಲಿಸುವ ಸದುದ್ದೇಶದಿಂದ ಇಂತಹದೊಂದು ಮಹತ್ವದ ಕಾರ್ಯಕ್ಕೆ ಡಾ.ವಿ.ಎಸ್.ವಿ ಪ್ರಸಾದ ಹಾಗೂ RED FM 93.5 ಮುಂದಾಗಿದೆ.
ಇನ್ನೂ RED FMನ ಸಮ್ಮರ್ ಸ್ಮೈಲ್ ಅಭಿಯಾನಕ್ಕೆ ಡಾ.ವಿ.ಎಸ್.ವಿ ಪ್ರಸಾದ ಅವರು ಪ್ರಾಯೋಜಕತ್ವ ನೀಡಿದ್ದು, ಹುಬ್ಬಳ್ಳಿ ಕಾಟನ್ ಮಾರ್ಕೆಟ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಅಭಿಯಾನದ ವಾಹನಕ್ಕೆ ಹಾಗೂ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಎಸಿಪಿ ಐ.ಎಸ್.ದೊಡ್ಡಮನಿಯವರ ನೇತೃತ್ವದಲ್ಲಿ ರೆಡಿಯೋ ಜಾಕಿ ರಶೀದ್ ಅವರು ಸಿಬ್ಬಂದಿಗಳಿಗೆ ಕಿಟ್ ವಿತರಣೆ ಮಾಡಿದರು.
ಇನ್ನೂ ಕಿಟ್ ಪಡೆದುಕೊಂಡ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದು, ಇಂತಹ ಕಾರ್ಯಕ್ಕೆ ಮುಂದಾಗಿರುವ ಡಾ.ವಿ.ಎಸ್.ವಿ ಪ್ರಸಾದ ಅವರಿಗೆ ಹಾಗೂ ರೆಡ್ ಎಫ್ಎಮ್ ಗೆ ಪೊಲೀಸ್ ಅಧಿಕಾರಿಗಳು ಕೃತಜ್ಞತೆ ಸಲ್ಲಿಸಿದರು.
ಒಟ್ಟಿನಲ್ಲಿ ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಕೆ ಇಂತಹದೊಂದು ಕೊಡುಗೆ ನೀಡಿರುವ ಡಾ.ವಿ.ಎಸ್. ವಿ ಪ್ರಸಾದ ಹಾಗೂ RED FM ಕಾರ್ಯ ಶ್ಲಾಘನೀಯವಾಗಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
31/05/2022 07:56 am