ಧಾರವಾಡ: ಕೊರೊನಾ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸುವುದಕ್ಕೋಸ್ಕರ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕೆ ಟು ಕೆ ಹೆಸರನಡಿ ಬೈಕ್ ಸವಾರಿ ನಡೆಸಿದ ಧಾರವಾಡದ ಯುವಕನ ಹೆಸರು ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ.
ಹೌದು! ಹೀಗೆ ಸರ್ಟಿಫಿಕೇಟ್ ಗಳನ್ನು ಹಿಡಿದು ನಿಂತಿರುವ ಯುವಕನ ಹೆಸರು ವಿಜೇತಕುಮಾರ ಹೊಸಮಠ. ಇವರಿಗೆ ಬೈಕ್ ಮೇಲೆ ದೇಶ ಪರ್ಯಟನೆ ಮಾಡುವುದು ಎಂದರೆ ಎಲ್ಲಿಲ್ಲದ ಖುಷಿಯಂತೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ವಿಜೇತಕುಮಾರ ಹೊಸಮಠ ಅವರು ತಮ್ಮ ಸ್ನೇಹಿತನೊಂದಿಗೆ ಕೊರೊನಾ ಜಾಗೃತಿ ಮೂಡಿಸಲು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬೈಕ್ ಸವಾರಿ ನಡೆಸಿದ್ದರು. ಅದು ಕೂಡ ಕೇವಲ 97 ಸಿಸಿ ಬೈಕ್ ನಲ್ಲಿ ಇವರು ದೇಶ ಪರ್ಯಟನೆ ಆರಂಭಿಸಿದ್ದರು. ಕೇವಲ 13 ದಿನದಲ್ಲಿ 6275 ಕಿಲೋ ಮೀಟರ್ ಸಂಚರಿಸಿ ಇವರು, ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಈ ಯುವಕರ ಸಾಧನೆ ಕಂಡು ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ಇವರಿಗೆ ಸರ್ಟಿಫಿಕೇಟ್ ನೀಡಿ ಗೌರವಿಸಿದೆ.
ಹೀಗೆ ದೇಶ ಪರ್ಯಟನೆ ಮಾಡಿ ಬಂದ ವಿಜೇತಕುಮಾರನ ಹೆಸರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲು ಮಾಡಿಕೊಂಡಿದೆ. ಅಲ್ಲದೇ ವಿಜೇತಕುಮಾರ ಬರುವ ಆಗಸ್ಟ್ ತಿಂಗಳ ಒಳಗಾಗಿ ಅಸ್ಸಾಂನತ್ತ ಮತ್ತೆ ಬೈಕ್ ಸವಾರಿ ಮಾಡುವ ಕನಸು ಹೊತ್ತಿದ್ದಾರೆ. ಇವರ ಸಾಧನೆ ಹೀಗೇ ಮುಂದುವರೆಯಲಿ ಎಂಬುದೇ ನಮ್ಮ ಆಶಯ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/05/2022 02:31 pm