ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಕಷ್ಟದ ಹಿಂದೆ ಸುಖವುಂಟು, ತಾಯಿ ಇಲ್ಲದ ಮಕ್ಕಳಿಗೆ ನೆಲೆ ಉಂಟು

ಕುಂದಗೋಳ: ಅಬ್ಬಾ ! ಕಷ್ಟದ ಹಿಂದೆ ಸುಖವುಂಟು ನೋವಿನ ಹಿಂದೆ ನಲಿವುಂಟು ಎಂಬ ಮಾತು, ತಾಯಿ ಕಳೆದುಕೊಂಡು ಶಿಕ್ಷಣ ಮೊಟಕುಗೊಳಿಸಿ ತಂಗಿಗೆ ತಾಯಿ ಸ್ಥಾನದಲ್ಲಿ ನಿಂತ ಯುವತಿ ಗೀತಾ ಬಾಳಲ್ಲಿ ಅಕ್ಷರಶಃ ನಿಜವಾಗಿದೆ.

ಕುಂದಗೋಳ ತಾಲೂಕಿನ ನೆಲಗುಡ್ಡ ಗ್ರಾಮದ ಗುರಶಿದ್ಧಪ್ಪ ಗಾಣಿಗೇರ ಎಂಬವವರ ಪತ್ನಿ 17 ವರ್ಷದ ಬಳಿಕ ಎರಡನೇ ಹೆಣ್ಣು ಮಗುವಿಗೆ ಜನ್ಮ ನೀಡಿ ಅಕಾಲಿಕ ಮರಣಕ್ಕೆ ತುತ್ತಾದರೂ, ಆ ಬಳಿಕ ಕುಟುಂಬದ ಜವಾಬ್ದಾರಿ ತಂಗಿಯ ಪೋಷಣೆ ಹಿರಿ ಮಗಳು ಗೀತಾ ಹೆಗಲೇರಿತ್ತು. ಇತ್ತ ತಂದೆ ಗುರಶಿದ್ಧಪ್ಪ ಅಕಾಲಿಕ ಮಳೆಗೆ ಮನೆ ಬಿದ್ದ ಪರಿಣಾಮ ರಸ್ತೆ ಬದಿ ಗುಡಿಸಲಲ್ಲೇ ವಾಸ, ಕೂಲಿ ಮಾಡುತ್ತಾ ಮಕ್ಕಳ ಜೊತೆ ಜೀವನ ನಡೆಸುವ ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಈ ಹಿಂದೆ ವರದಿ ಸಹ ಬಿತ್ತರಿಸಿತ್ತು.

ಇದೀಗ ಆ ಕುಟುಂಬದ ಬಾಳಿಗೆ ಬೆಳಕು ಹರಡಿದ್ದು, ಅವಧೂತ ವಿನಯ ಗುರೂಜಿ ಮಹಾತ್ಮಾಗಾಂಧಿ ಸೇವಾ ಟ್ರಸ್ಟ್ ಹಾಗೂ ನಿರಾಮಯ ಫೌಂಡೇಶನ್ ಮತ್ತು ಸಮಾನ ಮನಸ್ಕ ಯುವಕರ ತಂಡದ ನೇತೃತ್ವದಲ್ಲಿ ನೂತನ ಮನೆ ನಿರ್ಮಾಣ ಕಾಮಗಾರಿಗೆ ಅದೆಷ್ಟೋ ಸಮಾಜ ಸೇವಕ, ಗಣ್ಯರು, ಕೊಡುಗೈ ದಾನಿಗಳ ಸಹಾಯಹಸ್ತ ತಲುಪಿ ಇಂದು ಮನೆ ನಿರ್ಮಾಣ ಭೂಮಿ ಪೂಜೆ ನೆರವೇರಿಸಿದೆ.

ತಾಯಿ ಇಲ್ಲದೆ ವಾಸಿಸಲು ಸೂರಿಲ್ಲದೇ ಗುಡಿಸಲಲ್ಲೇ ಜೀವನ ದೂಡಿದ ಕುಟುಂಬ ಕಾಣದ ಕೈಗಳ ನೆರವಿನಿಂದ ಎಲ್ಲರಂತೆ ಚೆಂದದ ಬದುಕು ಕಟ್ಟಿಕೊಳ್ಳಲು ಮುಂದಾಗಿದೆ‌.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

14/05/2022 08:17 pm

Cinque Terre

156.76 K

Cinque Terre

2

ಸಂಬಂಧಿತ ಸುದ್ದಿ