ಹುಬ್ಬಳ್ಳಿ: ಯಾವುದಾದರೂ ಐತಿಹಾಸಿಕ ಸ್ಥಳಗಳನ್ನು ನೋಡಲು ಐತಿಹಾಸಿಕ ತಾಣಗಳಿಗೆ ಭೇಟಿ ನೀಡಬೇಕಿತ್ತು. ಆದರೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ನಿಲ್ದಾಣದಲ್ಲಿಯೇ ಐತಿಹಾಸಿಕ ತಾಣದ ಅನುಭವ ನೀಡುತ್ತಿದೆ. ಅರೇ ಅದು ಎಲ್ಲಿ ಅಂತೀರಾ ಅದುವೇ ವಾಣಿಜ್ಯನಗರಿ ಹುಬ್ಬಳ್ಳಿ ನೈಋತ್ಯ ರೈಲ್ವೆ ವಲಯದ ನಿಲ್ದಾಣದಲ್ಲಿ.
ವಿಶ್ವದ ಅತಿದೊಡ್ಡ ರೈಲ್ವೆ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶ್ರಕೊ ಸದ್ಗುರು ಸಿದ್ಧಾರೂಢ ರೈಲ್ವೇ ನಿಲ್ದಾಣದಲ್ಲಿ ಐತಿಹಾಸಿಕ ಗತವೈಭವ ಸಾರುವ ರೀತಿಯಲ್ಲಿ ಕಲಾಕೃತಿಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಕಾಮಗಾರಿ ಭರದಿಂದ ಸಾಗಿದೆ.
ಐತಿಹಾಸಿಕ ಕಲಾಕೃತಿಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸುವ ಹಾಗೂ ಜನರಿಗೆ ಪಾರಂಪರಿಕ ಪಾಠವನ್ನು ಹೇಳುವಂತ ಸದುದ್ದೇಶದಿಂದ ಇಂತಹದೊಂದು ವಿನೂತನ ನಿರ್ಧಾರಕ್ಕೆ ನೈಋತ್ಯ ರೈಲ್ವೆ ವಲಯ ಸಿದ್ಧವಾಗಿದೆ.
Kshetra Samachara
09/03/2022 12:32 pm