ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವೃದ್ಧಾಶ್ರಮ, ಅನಾಥಾಶ್ರಮದಲ್ಲಿ ಅಪ್ಪು ಡೇ ಆಚರಿಸಿದ ಯುವಕರು

ಹುಬ್ಬಳ್ಳಿ: ಪವರ್ ಸ್ಟಾರ್, ಯುವರತ್ನ ಪುನೀತ್ ರಾಜ್ಕುಮಾರ ಅವರ ಅಗಲಿಕೆಯನ್ನು ಮರೆಯಲು ಸಾಧ್ಯವೇ ಇಲ್ಲ. ಅದೇ ರೀತಿ ಇಲ್ಲೊಂದು ಯುವಕರ ತಂಡ ರಾಜಕುಮಾರನ ನೆನಪಿಗಾಗಿ ವೃದ್ಧಾಶ್ರಮ, ಅನಾಥಾಶ್ರಮದಲ್ಲಿ ಅಪ್ಪು ಡೇ ಆಚರಿಸಿದ್ದಾರೆ.

ಶಿವರಾತ್ರಿ ಆಚರಣೆ ಅಂಗವಾಗಿ, ಹುಬ್ಬಳ್ಳಿಯ ಆಟೋರಿಕ್ಷಾ ಫೌಂಡೇಶನ್ ವತಿಯಿಂದ, ಅಪ್ಪು ಭಾವಚಿತ್ರ ಇರುವ ಬ್ಯಾಡ್ಜ್ ಕೊಟ್ಟು ನವನಗರದ ವೃದ್ಧಾಶ್ರಮ, ಅನಾಥಾಶ್ರಮಗಳಲ್ಲಿ ವೃದ್ಧರು ಮತ್ತು ಮಕ್ಕಳ ಜೊತೆ ಅಪ್ಪು ಎಂದರೆ ಕನ್ನಡದ ಪ್ರೀತಿಯ ಪುತ್ರ, ಅಪ್ಪು ಎಂದರೆ ಅನಾಥ ಮಕ್ಕಳಿಗೆ ಅಣ್ಣ, ಅಪ್ಪು ಅಂದ್ರೆ ವೃದ್ಧಾಶ್ರಮದ ಪ್ರೀತಿಯ ಮಗ, ಅಪ್ಪು ಎಂದರೆ ಖುಷಿ ಹಂಚಿಕೊಳ್ಳುವ ಮನಸ್ಸು, ಅಪ್ಪು ಎಂದರೆ ಹೃದಯವಂತಿಕೆ, ಅಪ್ಪು ಎಂದರೆ ಬೇರೆಯವರ ಜೀವನದಲ್ಲಿ ಖುಷಿಯನ್ನು ತುಂಬುವ ಆಗರ್ಭ ಶ್ರೀಮಂತ, ಅಪ್ಪು ಎಂದರೆ ಈ ಜಗತ್ತು ಎಂದೂ ಮರೆಯಲಾಗದ ಮಿಂಚು ಎಂದು ಪ್ರತಿಜ್ಞೆ ಮಾಡಿದರು.

ಇದರಿಂದ ಮಕ್ಕಳಲ್ಲಿ ವೃದ್ಧರ ಮುಖದಲ್ಲಿ ಸಂತಸ ಮೂಡಿರುವುದು ಗಮನಾರ್ಹವಾಗಿದೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

01/03/2022 02:11 pm

Cinque Terre

71.19 K

Cinque Terre

5

ಸಂಬಂಧಿತ ಸುದ್ದಿ