ಹುಬ್ಬಳ್ಳಿ: ಬೆಳವಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ ಸೇರಿದಂತೆ ಕನ್ನಡನಾಡಿನ ವೀರವನಿತೆಯರ ಸಾಹಸಗಾಥೆಗಳನ್ನು ಪಠ್ಯದಲ್ಲಿ ಅಳವಡಿಸಿ ಮಕ್ಕಳಿಗೆ ಅವರ ಶೌರ್ಯ, ಸಾಹಸಗಳ ಪರಿಚಯ ಮಾಡಿಕೊಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯ ಆದರ್ಶನಗರದ ಸ್ವಗೃಹದಲ್ಲಿ ಬೆಳವಡಿ ಮಲ್ಲಮ್ಮನವರು ಮರಾಠಾ ಸೈನ್ಯದ ವಿರುದ್ಧದ ಜಯಗಳಿಸಿದ 374ನೇ ವರ್ಷಾಚರಣೆ ಸ್ಮರಣಾರ್ಥ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಸಾಂಕೇತಿಕವಾಗಿ ಬೆಳವಡಿ ಮಲ್ಲಮ್ಮನವರ ವಿಜಯ ದಿನವನ್ನು ಆಚರಿಸಲಾಗಿದೆ. ಕನ್ನಡನಾಡಿನ ಕೆಳದಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ,ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ ಸೇರಿದಂತೆ ಅನೇಕ ವೀರವನಿತೆಯರು ನಡೆಸಿದ ಹೋರಾಟ ವಿರೋಚಿತವಾಗಿದೆ.ಈ ಸಾಹಸಗಾಥೆಗಳನ್ನು ಪಠ್ಯದಲ್ಲಿ ಅಳವಡಿಸಿ ,ಮುಂದಿನ ಪೀಳಿಗೆಗೆ ಪರಿಚಯಿಸಲಾಗುವುದು. ಬರುವ ವರ್ಷ ಬೆಳವಡಿ ಗ್ರಾಮದಲ್ಲಿಯೇ ಅರ್ಥಪೂರ್ಣವಾಗಿ ವಿಜಯದಿನ ಆಚರಿಸಲಾಗುವುದು ಎಂದರು.
Kshetra Samachara
28/02/2022 11:43 am