ಕಲಘಟಗಿ: ಎಲ್ಲರಲ್ಲೂ ಒಂದಿಲ್ಲಾ ಒಂದು ರೀತಿಯ ವಿಶಿಷ್ಟವಾದ ಹವ್ಯಾಸಗಳು ಅವರಿಗೆ ಹೊಸ ವೇದಿಕೆ ಕಲ್ಪಿಸಿಕೊಡಲು ಕಾರಣವಾಗ್ತವೆ. ಅದರಂತೆ ಇಲ್ಲೊಬ್ಬ ವ್ಯಕ್ತಿ ನಾಣ್ಯ ಸಂಗ್ರಹಿಸುವ ಹವ್ಯಾಸದಿಂದ ಮಕ್ಕಳಿಗೆ ನಾಣ್ಯದ ಬಳಕೆ, ಕಾಲ, ವಸ್ತು ವಿಷಯದ ತಿಳುವಳಿಕೆ ಕೊಡ್ತಾರೆ. ಅಷ್ಟೇ ಅಲ್ಲ ಮಕ್ಕಳ ಶಾಲಾ ಸೈಕಲ್ ಪಂಕ್ಚರ್ ಆಗಿದ್ದರೇ, ಉಚಿತವಾಗಿ ಅವುಗಳಿಗೆ ಪಂಕ್ಚರ್ ಕೂಡ ಹಾಕೊಡ್ತಾರೆ. ಬನ್ನಿ, ಹೇಳ್ತೀವಿ ಈ ಸ್ಟೋರಿ.
ಕಲಘಟಗಿ ಪಟ್ಟಣದ ಪಂಕ್ಚರ್ ಅಂಗಡಿ ಕಾಯಕದ ಸುನಿಲ್ ಕಮ್ಮಾರ್, ತಮ್ಮ ವೃತ್ತಿ ಜೊತೆ ಜೊತೆಗೆ ತಮ್ಮ 13 ನೇ ವಯಸ್ಸಿನಿಂದ ನಾಣ್ಯ ಸಂಗ್ರಹಿಸುವ ಹವ್ಯಾಸ ಮಾಡುತ್ತಾ, ಆ ನಾಣ್ಯಗಳ ಮಾಹಿತಿಯನ್ನು ಶಾಲಾ ಕಾಲೇಜುಗಳ ಮಕ್ಕಳಿಗೆ ಪ್ರದರ್ಶನ ಏರ್ಪಡಿಸಿ ತಿಳಿಸುತ್ತಿದ್ದಾರೆ.
33 ವರ್ಷದ ಸುನಿಲ್ ಕಮ್ಮಾರ್, ಮೊದಲು ತಮ್ಮಲ್ಲಿರುವ ಅಪರೂಪದ ಹಳೆಯ ಕಾಲದ ನಾಣ್ಯಗಳನ್ನ ಜತನದಿಂದಳೇ ಇಡುತ್ತಿದ್ದರು. ಅದೇ ಮುಮದೆ ಹವ್ಯಾಸವಾಗಿದೆ. ಬೇರೆಯವರ ಬಳಿಯಲ್ಲಿದ್ದ ಹಳೆಯ ಕಾಲದ ನಾಣ್ಯಗಳನ್ನು ಹಳ್ಳಿ ಮತ್ತು ನಗರಗಳಿಗೆ ತರಳಿ ಹಣಕೊಟ್ಟು ಪಡೆದು ಸಂಗ್ರಹಿಸಿದ್ದಾರೆ.
ಸದ್ಯ ಸುನಿಲ್ ಅವರ ಬಳಿ 2 ಕೆಜಿ ಯಷ್ಟು ನಾಣ್ಯಗಳಿದ್ದು, ಅದರಲ್ಲಿ ಬೆಳ್ಳಿ, ಕಂಚು, ತಾಮ್ರ, ಹಿತ್ತಾಳೆ ಲೋಹಗಳನ್ನು ಸೇರಿವೆ. ಇಂಗ್ಲೆಂಡಿನ ವಿಕ್ಟೋರಿಯಾ ರಾಣಿ ಮುಖ ಬೆಲೆಯದ್ದು, ಬ್ರಿಟೀಷ್ ಸರಕಾರದ ಬೆಳ್ಳಿ ನಾಣ್ಯಗಳು, ವಿಜಯನಗರ ಅರಸರ ಕಾಲದ ನಾಣ್ಯಗಳು, ಭಾರತ ಸರ್ಕಾರದ ಐದು ಜಿಂಕೆಗಳುಳ್ಳ ಐದು ರೂಪಾಯಿ ನೋಟು ಮತ್ತು ಕನ್ನಂಬಾಡಿ ಆನೆಕಟ್ಟು, ಖಾದಿ ಬಂಡಾರದ ಮುದ್ರೆಯುಳ್ಳ ನೋಟುಗಳು ಇವರಲ್ಲಿ ಅಪರೂಪದ ಸಂಗ್ರಹದಲ್ಲಿಯೇ ಇವೆ.
ಸುನಿಲ್ ಕಮ್ಮಾರ್ ಅವರು ಸ್ವಆಸಕ್ತಿಯಿಂದ ಶಾಲಾ ಕಾಲೇಜಗಳಲ್ಲಿ ಪ್ರದರ್ಶನ ಏರ್ಪಡಿಸಿದಾಗ, ಸ್ಥಳೀಯ ಶಾಸಕ ಸಿ.ಎಂ.ನಿಂಬಣ್ಣನವರ ಹಾಗೂ ಹನ್ನೆರಡು ಮಠದ ಶ್ರೀಗಳು ಸುನೀಲ್ ಕಮ್ಮಾರ್ ಅವರ ನಾಣ್ಯದ ಸಂಗ್ರಹದ ಕೌಶಲ್ಯ ಆಸಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Kshetra Samachara
24/02/2022 02:50 pm