ಧಾರವಾಡ: ಹಿರಿಯ ಕವಿ ಡಾ.ಚೆನ್ನವೀರ ಕಣವಿ ಅವರ ಪಾರ್ಥೀವ ಶರೀರವನ್ನು ಧಾರವಾಡದ ಪ್ರತಿಷ್ಠಿತ ಕರ್ನಾಟಕ ಕಾಲೇಜು ಆವರಣದಲ್ಲಿ ಅಂತಿಮ ದರ್ಶನಕ್ಕಿಡಲಾಗಿದ್ದು, ಕಣವಿ ಅವರ ದರ್ಶನ ಪಡೆಯಲು ವಿದ್ಯಾರ್ಥಿಗಳ ದಂಡೇ ಹರಿದು ಬರುತ್ತಿದೆ.
ಇನ್ನುಳಿದಂತೆ ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಅನೇಕ ಗಣ್ಯರು ಈಗಾಗಲೇ ಕಣವಿ ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಸಂಜೆ 5 ಗಂಟೆಯವರೆಗೆ ಕೆಸಿಡಿ ಕಾಲೇಜಿನಲ್ಲಿ ಕಣವಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ನಡೆಯಲಿದ್ದು, ಅದಾದ ನಂತರ ಅವರ ಫಾರ್ಮ್ ಹೌಸ್‌ನಲ್ಲೇ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು.
Kshetra Samachara
16/02/2022 05:06 pm