ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಖರ್ಬೂಜ್ ಹಣ್ಣಿನಲ್ಲಿ ಮೂಡಿಬಂದ ಚೆಂಬೆಳಕಿನ ಕವಿ

ಧಾರವಾಡ: ನಾಡಿನ ಹಿರಿಯ ಕವಿ ಡಾ.ಚೆನ್ನವೀರ ಕಣವಿ ಅವರು ಇಂದು ಅನಾರೋಗ್ಯದಿಂದ ನಿಧನರಾಗಿದ್ದು, ಧಾರವಾಡದ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಡಾ.ಕಣವಿ ಅವರಿಗೆ ವಿಶಿಷ್ಠ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಮಂಜುನಾಥ ಹಿರೇಮಠ ಅವರು ಖರ್ಬೂಜ್ ಹಣ್ಣಿನಲ್ಲಿ ಕಣವಿ ಅವರ ಕಲಾಕೃತಿ ರಚಿಸಿ ಅವರಿಗೆ ತಮ್ಮ ಕಲೆಯ ಮೂಲಕವೇ ಕಲಾ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಡಾ.ಕಣವಿ ಅವರು ಕನ್ನಡ ಸಾರಸ್ವತ ಲೋಕದ ಹಿರಿಯ ಕೊಂಡಿಯಂತಿದ್ದರು. ಇದೀಗ ಅವರನ್ನು ಕಳೆದುಕೊಂಡು ಇಡೀ ಕರುನಾಡು ಬಡವಾಗಿದೆ. ಅವರ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿಯುವುದರ ಜೊತೆಗೆ ಶ್ರದ್ಧಾಂಜಲಿ ಕೂಡ ಸಲ್ಲಿಸುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

16/02/2022 02:49 pm

Cinque Terre

16.64 K

Cinque Terre

2

ಸಂಬಂಧಿತ ಸುದ್ದಿ