ಕಲಘಟಗಿ : ನಿತ್ಯ ಕಾಯಕದ ಜೊತೆಗೆ ಲಿಂಗ ಪೂಜೆ ದಾಸೋಹ ನಡೆಸುತ್ತಿರುವ ತಿಪ್ಪಯಜ್ಜ ಮೂಲತ ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದವರು.
ವೃತ್ತಿ ಅರಸಿ ಕಲಘಟಗಿಗೆ ಬಂದ ಇವರು ಚಿತ್ರಕಲೆಯಿಂದ ಬದುಕು ಕಟ್ಟಿಕೊಂಡರು. ಇನ್ನು ಉಳವಿ ಜಾತ್ರೆ ಬಂದರೆ ಇವರಿಗೆ ಹಬ್ಬವೊ ಹಬ್ಬ ಕಾಲ್ನಡಿಗೆ, ಚಕ್ಕಡಿಗಳ ಮೂಲಕ ಬರುವ ಭಕ್ತರಿಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ಕಾಲತೊಳೆಯಲು ಬಿಸಿ ನೀರು, ಉಪಾಹಾರ, ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲದೆ ಬರುವ ಭಕ್ತರ ಆರೋಗ್ಯ ದಲ್ಲಿ ವ್ಯತ್ಯಾಸವಾದಲ್ಲಿ ಔಷದೋಪಚಾರನ್ನು ಸಹ ಮಾಡುತ್ತಾ ತಮ್ಮ ನಿಶ್ಕಲ್ಮಶ ಸೇವೆ ನೀಡುತ್ತಿದ್ದಾರೆ.
ಬಿಜಾಪುರ, ನರಗುಂದ, ಶಿರಗುಪ್ಪಿ ಸೇರಿದಂತೆ ವಿವಿಧ ಊರುಗಳಿಂದ ಬರುವ ಭಕ್ತರು ಇವರ ಆತಿಥ್ಯ ಸ್ವೀಕರಿಸಿ ತಿಪ್ಪಯಜ್ಜ ಇದ್ದರೆ ಊಟ, ಉಪಹಾರದ ತೊಂದರೆ ಇಲ್ಲ ಉಳವಿ ಚನ್ನಬಸವೇಶ್ವರ ಇವರಿಗೆ ಎಲ್ಲ ಸುಖ ಸಂಪತ್ತು ನೀಡಲೆಂದು ಮನತುಂಬಿ ಹರಸಿ ಹಾರೈಸುತ್ತಾರೆ.
ಇನ್ನು ತಿಪ್ಪಯಜ್ಜ ನಿತ್ಯ ದಾಸೋಹದ ಅನುಭವ ಮಂಟಪ ನಿರ್ಮಾಣ ಮಾಡುವ ಕನಸಿದ್ದು ಅದನ್ನು ನನ್ನ ಕಾಯಕದ ಹಣದಿಂದಲೇ ಮಾಡುತ್ತೇನೆಂದು ಹೆಮ್ಮೆಯಿಂದ ಹೇಳುತ್ತಾರೆ.
Kshetra Samachara
13/02/2022 08:39 pm